Thursday, August 20, 2026

BDA Apartments

Home Front Page ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನಗಳು ಬೇಡ-ಸಚಿವ ಎಸ್.ಟಿ ಸೋಮಶೇಖರ್.

ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನಗಳು ಬೇಡ-ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಆಗಸ್ಟ್,15,2021(www.justkannada.in):  ಸಿಂ ಬಸವರಾಜ ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನಗಳು ಬೇಡ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ಮೈಸೂರಿನಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಸಚಿವ ಎಸ್. ಟಿ.ಸೋಮಶೇಖರ್, ಸಿಎಂ ಬದಲಾದಾಗ ಸಿದ್ದರಾಮಯ್ಯ ಬೇರೆ ಬೇರೆ ಪ್ಲಾನ್ ನಲ್ಲಿ ಇದ್ರು. ಏನೇನೋ ಆಗಿ ಬಿಡುತ್ತದೆ ಎಂದು ಲೆಕ್ಕ ಹಾಕಿಕೊಂಡಿದ್ರು. ಅವರ ಯಾವ ಪ್ಲಾನ್ ಯಶಸ್ವಿಯಾಗಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಸುಮ್ಮನೆ ಸರ್ಕಾರ ಅಲ್ಪಾವಧಿಯ ಅಂತಾ ಹೇಳುತ್ತಿದ್ದಾರೆ. ಸಿಎಂ ಬೊಮ್ಮಾಯಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಗೆ ವಿಷಯಗಳೇ ಇಲ್ಲ. ಒಂದಿಬ್ಬರ ಹೇಳಿಕೆಯನ್ನ ಹಿಡಿದುಕೊಂಡು ಸರ್ಕಾರದ ಸ್ಥಿರತೆ ಬಗ್ಗೆ ಮಾಧ್ಯಮದವ್ರು ಚರ್ಚೆ ಮಾಡುವುದು ಬೇಡ. ಸಿಎಂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಬುದ್ದಿವಂತಿಕೆ ಹೊಂದಿದ್ದಾರೆ ಎಂದು ನುಡಿದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ರಾಮದಾಸ್ ಅಸಮಾಧಾನ ಕುರಿತು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ರಾಮದಾಸ್ ಹಿರಿಯರಿದ್ದಾರೆ. ಅವರು ಸರ್ಕಾರಕ್ಕೆ ಸಲಹೆಗಳನ್ನು ಕೊಟ್ಟಿದ್ದಾರೆ. ನಾನು ಮೊದಲ ಅವಧಿ ಮುಗಿದ ಮೇಲೆ ಮೈಸೂರಿಗೆ ಧನ್ಯತಾ ಪತ್ರ ಬರೆದಿದ್ದೆ. ಆದ್ರೆ ರಾಜಕಾರಣ ಕೆಲವೊಮ್ಮೆ ಬದಲಾಗುತ್ತದೆ. ಈಗ ಮತ್ತೆ ಅವಕಾಶ ಸಿಕ್ಕಿದೆ. ರಾಮದಾಸ್ ಅವರ ಮಾರ್ಗದರ್ಶನದಲ್ಲಿ ಒಂದು ವರ್ಷ ಉಸ್ತುವಾರಿ ಜವಾಬ್ದಾರಿ ಮುಗಿಸಿದ್ದೇನೆ. ಉಳಿದ ಅವಧಿಯಲ್ಲಿಯೂ ಅವರ ಮಾರ್ಗದರ್ಶನದಲ್ಲಿ ಮುಂದುವರೆಸುವೆ. ನಮ್ಮಿಂದ ಎಂದೂ ಅವರಿಗೆ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

Key words: no doubts -about – full term – Bommai government-Minister -ST Somashekhar.