ಪರಿಷತ್ ಚುನಾವಣೆ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ: ಸಿಎಂ, ಡಿಸಿಎಂ ನಿರ್ಧಾರವೇ ಅಂತಿಮ- ಸಚಿವ ಎನ್.ಎಸ್ ಬೋಸರಾಜು.

ಬೆಂಗಳೂರು,ಜೂನ್,12,2023(www.justkannada.in): ವಿಧಾನ ಪರಿಷತ್ ಚುನಾವಣೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನಮ್ಮ ಹೈಕಮಾಂಡ್ ಸಿಎಂ ಡಿಸಿಎಂ ನಿರ್ಧಾರವೇ ಅಂತಿಮ  ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್ ಬೋಸರಾಜು ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎನ್.ಎಸ್ ಬೋಸರಾಜು, ನಮ್ಮ ನಾಯಕರು ಹೇಳಿದ ಕೆಲಸ ಮಾಡಿಕೊಂಡು ಹೋಗುತ್ತೇನೆ.  ಎಲ್ಲಾ ಸಮಸ್ಯೆಗಳನ್ನ ಸಿಎಂ ಡಿಸಿಎಂ ಬಗೆಹರಿಸುತ್ತಾರೆ. ಕೊಟ್ಟ ಕೆಲಸವನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

ಇಡೀ ರಾಜ್ಯದಲ್ಲಿ ಕೆರೆ ತುಂಬುವ ಕೆಲಸ  ಆಗುತ್ತಿದೆ.  ಈಗಾಗಲೇ ಕೆಸಿ ವ್ಯಾಲಿ ಎರಡು  ಯೋಜನೆ ಯಶಸ್ವಿಯಾಗಿದೆ. 3ನೇ ಯೋಜನೆ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗುತ್ತದೆ.  1080 ಕೋಟಿ ವೆಚ್ಚದಲ್ಲಿ ತುಮಕೂರಿಗೆ ನೀರು ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದರು.

Key words: no discussion –legislative- council-elections- Minister- NS Bosaraju.