Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ‘ಕೈ’ ಅಭ್ಯರ್ಥಿಗಳು, ಶಾಸಕರಲ್ಲಿ ವಿಶ್ವಾಸವಿಲ್ಲ:ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ- ಸಚಿವ ಅಶ್ವಥ್ ನಾರಾಯಣ್.

‘ಕೈ’ ಅಭ್ಯರ್ಥಿಗಳು, ಶಾಸಕರಲ್ಲಿ ವಿಶ್ವಾಸವಿಲ್ಲ:ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ- ಸಚಿವ ಅಶ್ವಥ್ ನಾರಾಯಣ್.

ಹಾಸನ,ಮಾರ್ಚ್,31,2023(www.justkannada.in): ಬಿಜೆಪಿ ಶಾಸಕರಿಗೆ ಡಿ.ಕೆ ಶಿವಕುಮಾರ್ ಕರೆ ಮಾಡಿದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್,  ಕಾಂಗ್ರಸ್ ನವರು ಅಲ್ಲೇ ಇದ್ರೆ ಹೆಚ್ಚು   ಕಾಂಗ್ರೆಸ್ ಪಕ್ಷ ಈಗಿರುವ ಶಾಸಕರ ಸಂಖ್ಯೆಯನ್ನೇ ದಾಟಲು ಸಾಧ್ಯವಿಲ್ಲ. ಕಾಂಗ್ರೆಸ್ ಶಾಸಕರಾಗಲಿ ಅಭ್ಯರ್ಥಿಗಳಾಗಿ ಯಾರಿಗೂ ವಿಶ್ವಾಸವಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.

ಇನ್ನು ಎ.ಟಿ ರಾಮಸ್ವಾಮಿ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ್, ಎಟಿ ರಾಮಸ್ವಾಮಿ ಬಿಜೆಪಿ ಸೇರ್ಪಡೆ ಬಗ್ಗೆ ಹೆಚ್ಚಿನ  ಮಾಹಿತಿ ಇಲ್ಲ. ಪಕ್ಷ ಸೇರ್ಪಡೆಯಾಗುವಂತಹ ವಿಚಾರ ಇದ್ದರೇ ನಿಮಗೆ ತಿಳಿಸುತ್ತೇವೆ . ಈಗಿನ ಪರಿಸ್ಥಿತಿಯಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

Key words: No confidence –congress- candidates-not -come – power – Minister -Aswath Narayan.