ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಮಾ.20 ರಂದು ಗಲ್ಲುಶಿಕ್ಷೆ…

ನವದೆಹಲಿ,ಮಾ,5,2020(www.justkannada.in):  ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ನಾಲ್ವರು ಅಪರಾಧಿಗಳಿಗೆ ಮಾರ್ಚ್ 20 ರಂದು ಗಲ್ಲು ಶಿಕ್ಷೆ ನಿಗದಿಯಾಗಿದೆ.

ಅಪರಾಧಿಗಳಿಗೆ ಇಂದು ಕೋರ್ಟ್ ಗಲ್ಲು ಶಿಕ್ಷೆ ಫಿಕ್ಸ್ ಮಾಡಿದ್ದು, ಮಾರ್ಚ್ 20ರ ಬೆಳಿಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಗೊಳಿಸಿ, ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಹೊಸ ಡೆತ್ ವಾರೆಂಟ್ ಜಾರಿಗೊಳಿಸಿದೆ. ನಿರ್ಭಯಾ ಅತ್ಯಾಚಾರಿ ಆರೋಪಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಅಲ್ಲದೇ ಅತ್ಯಾಚಾರಿಗಳ ಎಲ್ಲಾ ಕಾನೂನು ಹೋರಾಟ ಅಂತ್ಯಗೊಂಡಿತ್ತು.

ಆದ್ರೇ ದೆಹಲಿಯ ಪಾಟಿಯಾಲ ಕೋರ್ಟ್ ನಲ್ಲಿ ಆರೋಪಿಗಳು ಸಲ್ಲಿಸಿದ್ದ ಕ್ಷಮಾಧಾನ ಕೋರಿದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಪಾಟಿಯಾಲ ಕೋರ್ಟ್, ಗಲ್ಲು ಶಿಕ್ಷೆಯನ್ನು ಮುಂದೂಡಿತ್ತು. ಇದೀಗ ದೆಹಲಿಯ ಪಾಟಿಯಾಲ ಕೋರ್ಟ್ ಮಾರ್ಚ್ 20ರ, ಬೆಳಿಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಮಾಡಿ, ಮತ್ತೆ ಹೊಸ ಡೆತ್ ವಾರೆಂಟ್ ಜಾರಿಗೊಳಿಸಿದೆ.

Key words: Nirbhaya -gang rape- murder- case-four convicts -sentenced –death- March 20.