ಇಂದು ಸಿಎಂ ಬಿಎಸ್ ವೈ ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಕಟುವಾಗಿ ಟೀಕಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ…

ಬೆಂಗಳೂರು,ಮಾ,5,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ಇಂದು ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.

ಇಂದಿನ ಬಜೆಟ್ ರೈತರ ವಿರೋಧಿ ಬಜೆಟ್, ಬಜೆಟ್ ನಲ್ಲಿ ರೈತರಿಗೆ ಅನುಕೂಲ ಇಲ್ಲ.  ನೀರಾವರಿಗೆ ಆದ್ಯತೆ ಕೊಟ್ಟಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, 2020,21ನೇ ಸಾಲಿನ ಬಜೆಟ್ ನಲ್ಲಿ ಏನು ಇಲ್ಲ. ಇವರು ಮಹದಾಯಿ ಕ್ರೆಡಿಟ್ ಪಡೆಯು ಹೊರಟಿದ್ದಾರೆ.  ಮಹದಾಯಿ ಯೋಜನೆಗೆ ಇವರ ಕೊಡೆಗೆ ಏನಿದೆ.  ಪ್ರಧಾನಿ ಮೋದಿ ಕರೆದು ಸಭೆ ಮಾಡ್ತಾರಂತೆ.  ಮಹದಾಯಿ  ಯೋಜನೆಗೆ ನೀಡಿರುವ 500 ಕೋಟಿ ಯಾವುದಕ್ಕೂ ಸಾಲಲ್ಲ.  2 ವರ್ಷಗಳ ಒಳಗಾಗಿ  ಯೋಜನೆ ಪೂರ್ಣಗೊಳಿಸಬೇಕು ಎಂದರು.

ಬಜೆಟ್ ನಲ್ಲಿ  ಒಂದೇ ಒಂದು ಹೊಸ ಕಾರ್ಯಕ್ರಮ ಕೊಟ್ಟಿಲ್ಲ, ಯಡಿಯೂರಪ್ಪ ಬಜೆಟ್ ಒಂದು ನೀರಸ ಬಜೆಟ್ ಆಗಿದೆ. ಇದನ್ನು ಯಾವುದೇ ಹಣಕಾಸು ತಜ್ಞರು ಉತ್ತಮ ಬಜೆಟ್ ಎನ್ನಲು ಸಾಧ್ಯವಿಲ್ಲ. ಬಜೆಟ್ ನಲ್ಲಿ ಆದ್ಯತಾ ವಲಯಕ್ಕೆ ಏನು ಒತ್ತು ಕೊಟ್ಟಿಲ್ಲ.  ಬಜೆಟ್ ನಲ್ಲಿ ರೈತರಿಗೆ ಏನಾದ್ರೂ ಅನುಕೂಲವಾಗಿದೆಯಾ..? ಹಸಿರು ಶಾಲು ಹಾಕಿಕೊಂಡಾಕ್ಷಣ ರೈತರ ಪರವಾ..? ಬಜೆಟ್ ನಲ್ಲಿ ರೈತರಿಗೆ ಅನುಕೂಲ ಇಲ್ಲ.  ನೀರಾವರಿಗೆ ಆದ್ಯತೆ ಕೊಟ್ಟಿಲ್ಲ. 6 ವಲಯ ಮಾಡಿದ್ದೀವಿ ಎಂದಿದ್ದಾರೆ. ಅದನ್ನ ಬಿಟ್ಟರೇ ಬೇರೆ ಏನು ಇಲ್ಲ ಎಂದು ಸಿದ್ಧರಾಮಯ್ಯ ಟೀಕಿಸಿದರು.

Key words: Former CM -Siddaramaiah,- critic-  state budget.