ವಾಷಿಂಗ್ಟನ್, ಆಗಸ್ಟ್ 06,2025 (www.justkannada.in): ಆಗಸ್ಟ್ 1 ರಿಂದ ಜಾರಿಗೆ ಬಂದ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 25 ರಷ್ಟು ಹೆಚ್ಚಿಸುವುದಾಗಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಸಂದರ್ಶನವೊಂದರಲ್ಲಿ ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಕಿಡಿಕಾರಿದ್ದಾರೆ.
ಚೀನಾದಂತಹ ಶತ್ರು ರಾಷ್ಟ್ರಕ್ಕೆ ರಿಯಾಯಿತಿಗಳನ್ನು ನೀಡಬೇಡಿ ಮತ್ತು ಭಾರತದಂತಹ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧವನ್ನು ಹಾಳು ಮಾಡಬೇಡಿ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಕ್ರಮದಿಂದ ಅಮೆರಿಕ ಹಾಗೂ ಭಾರತದ ಸಂಬಂಧ ಹದಗೆಡಬಹುದು. ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಚೀನಾದಂತಹ ಶತ್ರು ರಾಷ್ಟ್ರಕ್ಕೆ ರಿಯಾಯಿತಿಗಳನ್ನು ನೀಡಬೇಡಿ ಎಂದು ನಿಕ್ಕಿಹ್ಯಾಲಿ ಹೇಳಿದ್ದಾರೆ. ಟ್ರಂಪ್ ಆಡಳಿತವು ಎರಡು ಮಾನದಂಡಗಳನ್ನು ಅಳವಡಿಸಿಕೊಂಡಿದೆ ಎಂದು ನಿಕ್ಕಿ ಹ್ಯಾಲಿ ಆರೋಪಿಸಿದರು. ಚೀನಾದೊಂದಿಗಿನ ವ್ಯಾಪಾರಕ್ಕಾಗಿ ಅಮೆರಿಕ 90 ದಿನಗಳ ಸುಂಕ ವಿನಾಯಿತಿ ನೀಡಿದೆ, ಆದರೆ ಭಾರತದ ಮೇಲೆ ರೊಚ್ಚಿಗೆದ್ದಿದೆ ಎಂದರು.
Key words: Tariff, relations, India, America, Nikki Haley, advises, Trump