Tuesday, September 29, 2026

BDA Apartments

ಚನ್ನಪಟ್ಟಣದಲ್ಲಿ ನಿಖಿಲ್ ಗೆದ್ದೇ ಗೆಲ್ಲುತ್ತಾರೆ- ಆರ್ ಅಶೋಕ್ ವಿಶ್ವಾಸ BDA JK_Adv...
Home Front Page ಚನ್ನಪಟ್ಟಣದಲ್ಲಿ ನಿಖಿಲ್ ಗೆದ್ದೇ ಗೆಲ್ಲುತ್ತಾರೆ- ಆರ್ ಅಶೋಕ್ ವಿಶ್ವಾಸ

ಚನ್ನಪಟ್ಟಣದಲ್ಲಿ ನಿಖಿಲ್ ಗೆದ್ದೇ ಗೆಲ್ಲುತ್ತಾರೆ- ಆರ್ ಅಶೋಕ್ ವಿಶ್ವಾಸ

ಬೆಂಗಳೂರು,ಅಕ್ಟೋಬರ್,25,2024 (www.justkannada.in):  ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಎನ್ ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಲಿದ್ದು ಈ ಕುರಿತು ಮಾತನಾಡಿದ ಆರ್. ಅಶೋಕ್, ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಸೋಲುತ್ತೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆ ಎಂದರು .

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ವಿರುದ್ದ ಗುಡುಗಿದ ಆರ್.ಅಶೋಕ್, ಸಿಪಿ ಯೋಗೇಶ್ವರ್ ಗೆ ಟಿಕೆಟ್ ಕೊಡಿಸಲು ಇಡೀ ಪಕ್ಷ ನಿಂತಿತ್ತು. ಜೆಡಿಎಸ್  ಕೂಡ ಟಿಕೆಟ್ ಆಫರ್ ನೀಡಿತ್ತು.  ಆದರೆ ಎಲ್ಲಾ ತಿರಸ್ಕರಿಸಿ ಸಿಪಿ ಯೋಗೇಶ್ವರ್  ಕಾಂಗ್ರೆಸ್ ಗೆ ಹೋಗಿದ್ದಾರೆ ಕಾಂಗ್ರೆಸ್ ನಲ್ಲಿ 2ನೇ ಸಾಲಿನಲ್ಲಿ ಕೂತಿದ್ದಾರೆ. ಮುಂದೆ ಅವರು ಯಾವ ಲೈನ್ ನಲ್ಲಿ ಕೂರುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

Key words: Nikhil, will, win, Channapatna, R Ashok