ನಿಖಿಲ್ ಬರ್ತ್ ಡೇ ದಿನವೇ ನಾಲ್ಕು ಚಿತ್ರಗಳ ಪೋಸ್ಟರ್ ರಿಲೀಸ್ !

ಬೆಂಗಳೂರು, ಜನವರಿ 22, 2019 (www.justkannada.in): ನಿಖಿಲ್ ಕುಮಾರ್ ಕುಮಾರಸ್ವಾಮಿ ಅವರಿಗೆ ಇಂದು ಜನ್ಮ ದಿನ ಸಂಭ್ರಮ…

ಜನ್ಮದಿನದ ಸಂಭ್ರಮದಲ್ಲಿರುವ ನಿಖಿಲ್ ಅವರ ಸಾಲು ಸಾಲು ಚಿತ್ರಗಳ ಪೋಸ್ಟರ್ ಗಳು ಇಂದು ರಿಲೀಸ್ ಆಗಿವೆ. ಇದರ ಜತೆಗೆ ನಿಖಿಲ್ ಅಭಿಮಾನಿಗಳು, ಸಿನಿಮಾರಂಗದವರು ಸೇರಿದಂತೆ ರಾಜಕೀಯದ ಮುಖಂಡರು ಸಹ ಶುಭಾಶಯಗಳನ್ನು ಕೋರುತ್ತಿದ್ದಾರೆ.

‘ಪೈಲ್ವಾನ್’ ಚಿತ್ರದ ಬಳಿಕ ನಿರ್ದೇಶಕ ಎಸ್ ಕೃಷ್ಣ, ನಿಖಿಲ್ ರಿಗಾಗಿ ಒಂದು ಸಿನಿಮಾ ಮಾಡಲಿದ್ದು, ಇದರೊಂದಿಗೆ ‘ಕುರುಕ್ಷೇತ್ರ’ ಬಳಿಕ ಮುನಿರತ್ನ ನಿರ್ಮಾಣದ ‘ಧನುಷ್ ಐಪಿಎಸ್’ ಸಿನಿಮಾ ಶುರುವಾಗಲಿದೆ.

ಸದ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಈ ಚಿತ್ರದ ನಿರ್ದೇಶಕರು ಯಾರು ಎಂಬುದನ್ನು ಚಿತ್ರತಂಡ ಬಹಿರಂಗ ಪಡಿಸಿಲ್ಲ. ನಿರ್ದೇಶಕ ಎಪಿ ಅರ್ಜುನ್ ಸಹ ನಿಖಿಲ್ ಕುಮಾರ್ ರೊಂದಿಗೆ ಒಂದು ಸಿನಿಮಾ ಮಾಡುತ್ತಿದ್ದಾರೆ.