Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Cinema ‘ನಾನು ಮತ್ತು ಗುಂಡ’ ದರ್ಶನಕ್ಕೆ ದಿನಗಣನೆ ಶುರು

‘ನಾನು ಮತ್ತು ಗುಂಡ’ ದರ್ಶನಕ್ಕೆ ದಿನಗಣನೆ ಶುರು

ಬೆಂಗಳೂರು, ಜನವರಿ 22, 2019 (www.justkannada.in): ಶಿವರಾಜ್‌ ಕೆ ಆರ್‌ ಪೇಟೆ ನಾಯಕನಾಗಿ, ನಾಯಕಿಯಾಗಿ ಸಂಯುಕ್ತಾ ಹೊರನಾಡು ಕಾಣಿಸಿಕೊಂಡಿರುವ ಗುಂಡ ಮತ್ತು ನಾನು ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದೆ.

ಇದೇ ತಿಂಗಳಲ್ಲಿ 24ರಂದು ತೆರೆಗೆ ಬರಲು ಚಿತ್ರ ಸಜ್ಜಾಗಿದೆ. ಆ ಮೂಲಕ ತುಂಬಾ ಗ್ಯಾಪ್‌ ನಂತರ ಸಂಯುಕ್ತಾ ಹೊರನಾಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ರಘು ಹಾಸನ್‌ ನಿರ್ಮಿಸಿ, ಶ್ರೀನಿವಾಸ್‌ ತಮ್ಮಯ್ಯ ಆ್ಯಕ್ಸನ್ ಕಟ್ ಹೇಳಿದ್ದಾರೆ.

ಇನ್ನು ಚಿತ್ರಕ್ಕೆ ಚಿದಾನಂದ್‌ ಕ್ಯಾಮೆರಾ ವರ್ಕ್, ಕಾರ್ತಿಕ್‌ ಶರ್ಮಾ ಸಂಗೀತ, ಶರತ್‌ ಚಕ್ರವರ್ತಿ ಡೈಲಾಗ್‌, ವಿವೇಕಾನಂದ ಕತೆಯನ್ನು ಒಳಗೊಂಡ ಈ ಚಿತ್ರದಲ್ಲಿ ಸಿಂಬಾ ಎನ್ನುವ ನಾಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ.