Monday, September 21, 2026

BDA Apartments

ಚನ್ನಪಟ್ಟಣಕ್ಕೆ ನಿಖಿಲ್ ಮೈತ್ರಿ ಅಭ್ಯರ್ಥಿ ಅಂತಾ ಮೊದಲೇ ಗೊತ್ತಿತ್ತು- ಡಿ.ಕೆ...
Home Front Page ಚನ್ನಪಟ್ಟಣಕ್ಕೆ ನಿಖಿಲ್ ಮೈತ್ರಿ ಅಭ್ಯರ್ಥಿ ಅಂತಾ ಮೊದಲೇ ಗೊತ್ತಿತ್ತು- ಡಿ.ಕೆ ಸುರೇಶ್ ಟೀಕೆ

ಚನ್ನಪಟ್ಟಣಕ್ಕೆ ನಿಖಿಲ್ ಮೈತ್ರಿ ಅಭ್ಯರ್ಥಿ ಅಂತಾ ಮೊದಲೇ ಗೊತ್ತಿತ್ತು- ಡಿ.ಕೆ ಸುರೇಶ್ ಟೀಕೆ

ಬೆಂಗಳೂರು,ಅಕ್ಟೋಬರ್,25,2024 (www.justkannada.in): ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸಿರುವುದಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಂಸದ ಡಿಕೆ ಸುರೇಶ್,  ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ ಆಗುತ್ತಾರೆ  ಅಂತಾ ಮೊದಲೇ ಗೊತ್ತಿತ್ತು. ನಿಖಿಲ್ ಕುಮಾರಸ್ವಾಮಿಯನ್ನು ಬಲವಂತವಾಗಿ  ಸ್ಪರ್ಧೆಗಿಳಿಸಿದ್ದಾರೆ ಎಂಬುದು ಸುಳ್ಳು. ಜೆಡಿಎಸ್ ಗೆ ಕುಮಾರಸ್ವಾಮಿಯೇ ಅಧಿ ನಾಯಕರು. ಎಚ್ ಡಿ ಕುಮಾರಸ್ವಾಮಿ ಉದ್ದೇಶ ಏನು ಎಂದು ಎಲ್ಲರಿಗೂ ಗೊತ್ತಿದೆ. ಈಗ ಚನ್ನಪಟ್ಟಣದಲ್ಲಿ ಡ್ರಾಮಾ ಶುರುವಾಗಿದೆ ಎಂದು ಲೇವಡಿ ಮಾಡಿದರು.

ಚನ್ನಪಟ್ಟಣ ಕ್ಷೇತ್ರಕ್ಕೆ ಸಿಪಿ ಯೋಗೇಶ್ವರ್ ಕರೆತಂದಿದ್ದಕ್ಕೆ ಕಾರ್ಯಕರ್ತರ ಅಸಮಾಧಾನವಿದೆಯೇ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ಈ ಕುರಿತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನವಿಲ್ಲ ಎಂದು ನುಡಿದರು.

Key words: Nikhil, alliance candidate, Channapatnam, DK Suresh