Wednesday, August 12, 2026

BDA Apartments

Home Crime ಎಸ್​ ಡಿ‌ಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಮನೆ ಮೇಲೆ ಎನ್ಐಎ ತಂಡ ದಾಳಿ,ಪರಿಶೀಲನೆ.

ಎಸ್​ ಡಿ‌ಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಮನೆ ಮೇಲೆ ಎನ್ಐಎ ತಂಡ ದಾಳಿ,ಪರಿಶೀಲನೆ.

ಮಂಗಳೂರು,ಸೆಪ್ಟಂಬರ್,8,2022(www.justkannada.in):  ಭಜರಂಗ ದಳದ ಕಾರ್ಯಕರ್ತ  ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಎಸ್​ ಡಿ‌ಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಮನೆ ಮೇಲೆ ಎನ್ ಐಎ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಮಂಗಳವಾರವಷ್ಟೇ ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ದಾಳಿ ನಡೆಸಿದ್ದ ಎನ್​ಐಎ ತಂಡ ಇದೀಗ ಎಸ್​ಡಿ‌ಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿಯ ಪರ್ಲಿಯಾ ಎಂಬಲ್ಲಿನ ರಿಯಾಜ್ ಮನೆ  ಮೇಲೆ ದಾಳಿ ನಡೆಸಿದ ಎನ್​ಐಎ ಅಧಿಕಾರಿಗಳು, ರಿಯಾಜ್ ಮೊಬೈಲ್ ವಶಕ್ಕೆ ಪಡೆದು ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಹತ್ಯೆ ಪ್ರಕರಣ ಸಂಬಂಧ ಮಂಗಳವಾರ ಬೆಳಗ್ಗೆ ಪುತ್ತೂರು ಹಾಗೂ ಸುಳ್ಯ ತಾಲೂಕಿನ 32 ಕಡೆಗಳಿಗೆ ದಾಳಿ ನಡೆಸಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿ ಸಾಕ್ಷಿಗಳನ್ನು ಸಂಗ್ರಹಿಸಿದ್ದರು.

ರಿಯಾಜ್ ಮನೆ ಮೇಲೆ ದಾಳಿ ಹಿನ್ನೆಲೆ, ಎಸ್ ​ಡಿಪಿಐ ಕಾರ್ಯಕರ್ತರು  ಗೋ ಬ್ಯಾಕ್ ಎನ್​ ಐಎ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಬಂಟ್ವಾಳ ಪೊಲೀಸರು ಭದ್ರತೆ ನೀಡಿದ್ದಾರೆ.

Key words: NIA- team –raided- SDPI National Secretary- Riaz- house