Sunday, August 2, 2026

BDA Apartments

Home Front Page ಸಚಿವ ಸ್ಥಾನ ಸಿಗದಿದ್ರೆ ನನ್ನ ಮುಂದಿನ ನಡೆ ಮನೆಯ ಕಡೆಗೆ-ಎಚ್ಚರಿಕೆ ಕೊಟ್ಟ ಬಿಜೆಪಿ ಶಾಸಕ ಉಮೇಶ್...

ಸಚಿವ ಸ್ಥಾನ ಸಿಗದಿದ್ರೆ ನನ್ನ ಮುಂದಿನ ನಡೆ ಮನೆಯ ಕಡೆಗೆ-ಎಚ್ಚರಿಕೆ ಕೊಟ್ಟ ಬಿಜೆಪಿ ಶಾಸಕ ಉಮೇಶ್ ಕತ್ತಿ…

ಬೆಂಗಳೂರು,ಆ,21,2019(www.justkannada.in) ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಮಂತ್ರಿ ಸ್ಥಾನ ಸಿಗದಿದ್ದದರೇ ನನ್ನ ನಡೆ ಮನೆಯ ಕಡೆಗೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಸಂಪುಟ ವಿಸ್ತರಣೆಯಾಗಿ 17 ಮಂದಿ ಶಾಸಕರು  ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ಸೇರಿದ್ದಾರೆ. ಸಂಪುಟ ವಿಸ್ತರಣೆ ಬೆನ್ನಲ್ಲೆ  ಅಸಮಾಧಾನ ಸ್ಪೋಟಗೊಂಡಿದ್ದು ಹಲವು ಶಾಸಕರ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂತೆಯೇ ಶಾಸಕ ಉಮೇಶ್ ಕತ್ತಿ ಸಹ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾತನಾಡಿದ ಶಾಸಕ ಉಮೇಶ್ ಕತ್ತಿ, ಈಗ ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ. ಮುಂದಿನ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದಿದ್ದರೇ ಮುಂದಿನ ನನ್ನ ನಡೆ ಮನೆಯ ಕಡೆಗೆ ಇರುತ್ತದೆ ಎಂದು ಹೇಳಿದ್ದಾರೆ.

Key words: next move – house –minister- position-BJP MLA Umesh katti-warned.