ನೋ ಬಾಲ್ ಗೆ ನಾನು ರನ್ ಔಟ್ ಆಗಿದ್ದೀನಿ: ಮುಂದೆ ಆಟದಲ್ಲಿ ಮತ್ತೆ ಗೆಲ್ತೀನಿ- ಸಚಿವ ಸ್ಥಾನ ಕೈತಪ್ಪಿದ ಕುರಿತು ಶಾಸಕ ರಾಜುಗೌಡ ಹೇಳಿಕೆ …

ಬೆಂಗಳೂರು,ಆ,21,2019(www.justkannada.in): ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಪಕ್ಷದಿಂದಲೂ ಸಂಘದಿಂದಲೂ ನನಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು. ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿದೆ.  ನೋ ಬಾಲ್ ಗೆ ನಾನು ರನ್ ಔಟ್ ಆಗಿದ್ದೀನಿ: ಮುಂದೆ ಆಟದಲ್ಲಿ ಮತ್ತೆ ಗೆಲ್ತೀನಿ ಎಂದು ಬಿಜೆಪಿ ಶಾಸಕ ರಾಜುಗೌಡ ಹೇಳಿದರು.

ಸಚಿವ ಸಂಪುಟ ರಚನೆ ವೇಳೆ ತಮಗೆ ಸ್ಥಾನ ಸಿಗದ ಹಿನ್ನೆಲೆ  ಇಂದು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಬಿಎಸ್ ಯುಡಿಯೂರಪ್ಪ ಅವರನ್ನ ಶಾಸಕ ರಾಜುಗೌಡ ಭೇಟಿಯಾಗಿ ಚರ್ಚಿಸಿದರು. ಬಳಿಕ ಮಾತನಾಡಿದ ಅವರು, ನನಗೆ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಈ ಸಂಬಂಧ ನಮ್ಮ ನಾಯಕರಾದ ಮುಖ್ಯಮಂತ್ರಿಗಳ ಬಳಿ‌ ಮಾತಾಡಿದ್ದೀನಿ. ಮುಂದಿನ ದಿನಗಳಲ್ಲಿ ಒಳ್ಳೆದಾಗುತ್ತೆ, ಚಿಂತೆ ಮಾಡಬೇಡ ಅಂತ ಸಿಎಂ ಹೇಳಿದ್ರು. ಹೊಸದಾಗಿ ಸಚಿವರಾದವವರಿಗೆ ಒಳ್ಳೆಯದಾಗಲಿ. ನನಗೆ ಸಚಿವ ಸ್ಥಾನ ತಪ್ಪಿಸಿದವರಿಗೂ ಒಳ್ಳೆಯದಾಗಲಿ ಎಂದರು.

ನಾನೊಬ್ಬ ಸ್ಪೋರ್ಟ್ಸ್ ಮ್ಯಾನ್ ಬೇಜಾರ್ ಏನಂದ್ರೆ ನೋ ಬಾಲ್ ಗೆ ನಾನು ರನ್ ಔಟ್ ಆಗಿದ್ದೀನಿ. ಆಟದಲ್ಲಿ ಸೋಲು ಗೆಲುವು ಕಂಡಿದ್ದೀನಿ. ನಾನು ಇನ್ನೂ ಚಿಕ್ಕವನು, ಮುಂದೆ ಆಟದಲ್ಲಿ ಮತ್ತೆ ಗೆಲ್ತೀನಿ. ನನಗೆ ಬೇಸರ ಏನಿಲ್ಲ ಎಂದು ಶಾಸಕ ರಾಜುಗೌಡ ತಿಳಿಸಿದರು.

ಹೈಕ‌ ಭಾಗದಲ್ಲಿ 15-16 ಶಾಸಕರು ಗೆದ್ದಿದ್ದೀವಿ. ಇನ್ನು 3-4 ಶಾಸಕರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ನಿಗಮ ಮಂಡಳಿ ನಿರೀಕ್ಷೆ ಇಟ್ಕೊಂಡಿಲ್ಲ. ನಮ್ಮ ವಾಲ್ಮೀಕಿ ಸಮಯದಾಯಕ್ಕೆ  ಶೇ‌.7.5 ಮೀಸಲಾತಿ ಕೊಡಲಿ . ಅಷ್ಟೇ ಸಾಕು ನನಗೆ ಎಂದು ರಾಜುಗೌಡ ತಿಳಿಸಿದರು.

Key words: ministrial-post- MLA Raju Gowda-cm bs yeddyurappa-meet