ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ತಲ್ವಾರ್ ನಿಂದ ದಾಳಿ.

Promotion

ದಕ್ಷಿಣ ಕನ್ನಡ,ಮೇ,24,2023(www.justkannada.in): ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ತಲ್ವಾರ್ ನಿಂದ ದಾಳಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಮಾಣಿ ಎಂಬ ಪ್ರದೇಶದಲ್ಲಿ ನಡೆದಿದೆ.

ಪೆರಾಜೆ ಭಜರಂಗದಳದ ಸಂಚಾಲಕ ಮಹೇಂದ್ರ ಮತ್ತು ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಮೇಲೆ ದಾಳಿಯಾಗಿದ್ದು ಇಬ್ಬರನ್ನು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿರುವ ಆರೋಪ ಕೇಳಿ ಬಂದಿದೆ. ಚುನಾವಣಾ ಫಲಿತಾಂಶದ ದಿನ ಸಂಭ್ರಮದ ಗಲಾಟೆಗೆ ಪ್ರತಿಕಾರದಿಂದ ಹಲ್ಲೆ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮಹೇಂದ್ರ ಮತ್ತು ಪ್ರಶಾಂತ್ ನಾಯ್ಕ್ ಅವರು ಹೋಗುತ್ತಿದ್ದ  ದ್ವಿಚಕ್ರವಾಹನಕ್ಕೆ ಓಮ್ನಿ ವಾಹನದಲ್ಲಿ ಬಂದು ಡಿಕ್ಕಿ ಹೊಡೆದಿದ್ದು ನಂತರ ಕೆಳೆಗೆ ಬಿದ್ದ ಇಬ್ಬರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Key words: Talwar-attacked- Bajrang Dal –BJP- workers.