ಬಿಜೆಪಿ ಸರ್ಕಾರ ತಂದಿದ್ದ ಎಲ್ಲಾ ಬಿಲ್, ಆದೇಶಗಳನ್ನ ವಾಪಸ್ ಪಡೆಯುತ್ತೇವೆ- ಸಚಿವ ಪ್ರಿಯಾಂಕ್ ಖರ್ಗೆ.

ಬೆಂಗಳೂರು,ಮೇ,24,2023(www.justkannada.in):ಮತಾಂತರ ನಿಷೇಧ ಕಾಯ್ದೆ, ಗೋ  ಹತ್ಯೆ ನಿಷೇಧ ಕಾಯ್ದೆ, ಸೇರಿದಂತೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ  ಎಲ್ಲಾ ಕಾಯ್ದೆಯನ್ನು ಪರಿಷ್ಕರಣೆ ಮಾಡಿ ವಾಪಸ್ಸು ಪಡೆಯುತ್ತೇವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಜಾರಿಗೆ ತಂದ ಎಲ್ಲಾ ಬಿಲ್, ಆದೇಶಗಳನ್ನ ಪರಿಷ್ಕರಣೆ ಮಾಡುತ್ತೇವೆ. ಕನ್ನಡಿಗರಿಗೆ ತೊಂದರೆಯಾಗುವ ಎಲ್ಲಾ ಆದೇಶಗಳನ್ನು ಮತ್ತು ಪಠ್ಯ ಪುಸ್ತಕ ರಚನೆಗೆ ಸಂಬಂಧಪಟ್ಟಂತೆ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಜಾರಿಗೆ ತಂದಿರುವ ಕಾಯ್ದೆಯನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದರು.

ಬಿಸಿ ನಾಗೇಶ್ ಅವರು ಶಿಕ್ಷಣ ಸಚಿವರಾಗಿದ್ದ ವೇಳೆಯಲ್ಲಿ ತೆಗೆದುಕೊಂಡಿದ್ದ ನಿರ್ಧಾರಗಳು ಹಲವು ವಿವಾದಗಳಿಗೆ ಕಾರಣವಾಗಿದ್ದು, ರೋಹಿತ್ ಚಕ್ರತೀರ್ಥ ಸಮಿತಿ ಬಸವಣ್ಣ, ಕುವೆಂಪು, ಬಿ.ಆರ್. ಅಂಬೇಡ್ಕರ್, ಟಿಪ್ಪು ಸುಲ್ತಾನ್ ಅವರನ್ನು ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ  ಬಂದಿತ್ತು.

Key words: BJP –government- bills –take- back-Minister- Priyank Kharge.