ಮಗನಿಗೆ ಜಿಯಾನ್ ಅಯ್ಯಪ್ಪ ಎಂದು ನಾಮಕರಣ ಮಾಡಿದ ಶ್ವೇತಾ ಚೆಂಗಪ್ಪ

Promotion

ಬೆಂಗಳೂರು, ಫೆಬ್ರವರಿ 05, 2019 (www.justkannada.in): ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಅವರು ತಮ್ಮ ಮಗನ ನಾಮಕರಣವನ್ನು ಅದ್ಧೂರಿಯಾಗಿ ಮಾಡಿದ್ದಾರೆ.

ಶ್ವೇತಾ ಅವರು ತಮ್ಮ ಮಗನಿಗೆ ಜಿಯಾನ್ ಅಯ್ಯಪ್ಪ ಎಂದು ಹೆಸರಿಟ್ಟಿದ್ದಾರೆ. ಕೊಡಗಿನ ಇಗ್ಗುಟ್ಟಪ್ಪ ದೇವಸ್ಥಾನದಲ್ಲಿ ಮಗನಿಗೆ ನಾಮಕರಣವನ್ನು ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶ್ವೇತಾ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಮಗನ ನಾಮಕರಣದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಜೊತೆಗೆ ತಮ್ಮ ಮಗನಿಗೆ ಇಟ್ಟಿರುವ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ. ಅಭಿಮಾನಿಗಳು ತಮ್ಮ ಮಗನಿಗೆ ಇಟ್ಟಿರುವ ಹೆಸರಿನ ಅರ್ಥವನ್ನು ಕೇಳಿದ್ದರು. ಹೀಗಾಗಿ ತಮ್ಮ ಪುತ್ರನಿಗೆ ಇಟ್ಟಿರುವ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ.