ಹಿಂದಿಗೆ ಡಬ್ ಆಗುತ್ತಿದೆ ರಿಷಬ್ ಶೆಟ್ಟಿಯ ಕಾಂತಾರ

Promotion

ಬೆಂಗಳೂರು, ಅಕ್ಟೋಬರ್ 07, 2022 (www.justkannada.in): ಕಾಂತಾರ ಚಿತ್ರವನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

ಅಂದಹಾಗೆ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಚಿತ್ರ ಇತಿಹಾಸ ಸೃಷ್ಟಿಸುತ್ತಿದೆ. ಇದೀಗ ಹಿಂದಿಗೆ ಚಿತ್ರವನ್ನು ಡಬ್ ಮಾಡಲು ಚಿತ್ರ ನಿರ್ಧರಿಸಿದೆ.

ಕಾಂತಾರ ಚಿತ್ರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು, ಸತತವಾಗಿ ಬಹುತೇಕ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ದಸರಾ ಹಬ್ಬಕ್ಕೂ ಹಿಂದೆ ಕಾಂತಾರ ಬಿಡುಗಡೆಯಾದ ಕಾರಣ ಸಾಲು ಸಾಲು ರಜೆ ಇದ್ದದ್ದು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ಚಿತ್ರದ ಹಿಂದಿ ಡಬ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಪೋಸ್ಟ್ ಮಾಡಿದ್ದು, ಕಾಂತಾರ ಚಿತ್ರದ ಹಿಂದಿ ಅವತರಣಿಕೆಯ ಟ್ರೈಲರ್ ಅಕ್ಟೋಬರ್ 9ರಂದು ಬೆಳಗ್ಗೆ 9.10ಕ್ಕೆ ಬಿಡುಗಡೆಗೊಳ್ಳಲಿದೆ.