ರೈಸ್ ಪುಲಿಂಗ್ ದಂಧೆ ದೇವರಾಜ ಪೊಲೀಸರಿಂದ ಐವರ ಬಂಧನ

ಮೈಸೂರು,ಅಕ್ಟೊಂಬರ್,04,2020(www.justkannada.in)  : ನಕಲಿ ರೈಸ್ ಪುಲ್ಲಿಂಗ್ ಸಾಮಗ್ರಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.jk-logo-justkannada-logoರೈಸ್ ಪುಲಿಂಗ್ ದಂಧೆ ಸಂಬಂಧಿಸಿದಂತೆ ಡಿಸಿಪಿ ಪ್ರಕಾಶ್ ಗೌಡ ಮಾತನಾಡಿ, ದಂಧೆಯಲ್ಲಿ ತೊಡಗಿದ್ದ ಐವರನ್ನು ಮೈಸೂರು ದೇವರಾಜ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.Rice-Puling-Dandhe-Devaraja-Five-arrested-policeಮೈಸೂರು ದೇವರಾಜ ಪೊಲೀಸರ ಕಾರ್ಯಚರಣೆ ಐವರು ವಶಕ್ಕೆ.ಬಂಧಿತರನ್ನು ತಮಿಳುನಾಡಿನ ಚಂದ್ರಮೋಹನ್(57), ಕೇರಳದ ಟಿ.ವಿ.ಇಬ್ರಾಹಿಂ (50), ಬೆಂಗಳೂರಿನ ಕೆ.ಆರ್.ಗಿರಿನಾಥನ್(49), ಎಂ.ಗೋಪಿ(40),ಚಾಮರಾಜನಗರದ ಇರ್ಷದ್ ಖಾನ್ ಎಂದು ಗುರುತಿಸಲಾಗಿದೆ.Rice-Puling-Dandhe-Devaraja-Five-arrested-police

ದಂಧೆ ಕೋರರು ಮೈಸೂರಿನ ಹೋಟೆಲೊಂದರಲ್ಲಿ ಕುಳಿತು ಪ್ಲಾನ್ ಮಾಡುತ್ತಿರುವ ಮಾಹಿತಿ ಪಡೆದು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ನಕಲಿ ರೈಸ್ ಪುಲ್ಲಿಂಗ ಸಾಮಾಗ್ರಿಗಳ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಶ್ರೀಮಂತರನ್ನ ಟಾರ್ಗೆಟ್ ಮಾಡಿಕೊಂಡು ಸಾಮಾಗ್ರಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ವಸ್ತುಗಳು ಮನೆಯಲ್ಲಿದ್ದರೆ ಮನೆ ಏಳಿಗೆಯಾಗುತ್ತೆ ಎಂದು ನಂಬಿಸುತ್ತಿದ್ದರು ಎಂದ ತಿಳಿದು ಬಂದಿದೆ.

ನಾಣ್ಯ,ಚಂಬು ಹಾಗೂ ವಿವಿಧ. ಸಾಮಾಗ್ರಿಗಳು ವಶ ಪಡೆಯಲಾಗಿದೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.

key words : Rice-Puling-Dandhe-Devaraja-Five-arrested-police