ಬಹಳ ದಿನಗಳ ಬಳಿಕ ವಿಜಯ್ ದೇವರಕೊಂಡ ಭೇಟಿ ಮಾಡಿದ ರಶ್ಮಿಕಾ

Promotion

ಬೆಂಗಳೂರು, ಸೆಪ್ಟೆಂಬರ್ 25, 2020 (www.justkannada.in): ವಿಜಯ್​ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ!

ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್​ ಸಿನಿಮಾಗಳ ಮೂಲಕ ಗಮನ ಸೆಳೆದ ಈ ಜೋಡಿ ಲಾಕ್ ಡೌನ್ ಬಳಿಕ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ವಿಜಯ್ ಮನೆಗೆ ರಶ್ಮಿಕಾ ಭೇಟಿ ನೀಡಿದ್ದಾರೆ.

ವಿಜಯ್​ ದೇವರಕೊಂಡ ಅವರ ಕುಟುಂಬ ಜತೆ ಲಿಲ್ಲಿ ತೆಗೆಸಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಿನ್ನೆ ವಿಜಯ್ ​ದೇವರಕೊಂಡ ಅವರ ಅಮ್ಮನ ಹುಟ್ಟುಹಬ್ಬ. 50ನೇ ವಸಂತಕ್ಕೆ ಕಾಲಿಟ್ಟ ಅಮ್ಮನ ಹುಟ್ಟುಹಬ್ಬವನ್ನು ಮನೆಯಲ್ಲಿ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಸರಳವಾಗಿ ಸಂಭ್ರಮಿಸಿದ್ದಾರೆ. ಈ ವೇಳೆ ರಶ್ಮಿಕಾ ಕೂಡ ಭೇಟಿ ನೀಡಿ ವಿಶ್ ಮಾಡಿ ಬಂದಿದ್ದಾರೆ.