ಲಾಕ್ ಡೌನ್ ತೆರವಿನ ಬಳಿಕ ಘಟನೆ, ಪಾಕ್ ವಿಮಾನ ಪತನ : 100ಕ್ಕೂ ಹೆಚ್ಚು ಮಂದಿ ಮೃತ..!

Promotion

 

ಕರಾಚಿ, ಮೇ 22, 2020 : (www.justkannada.in news ) ಪಾಕಿಸ್ತಾನದ ಕರಾಚಿಯ ಮಾಡೆಲ್ ಕಾಲೋನಿ ಪ್ರದೇಶದ ಬಳಿ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ವಿಮಾನ ಅಪಘಾತಕ್ಕೀಡಾಗಿದೆ. ಈ ವಿಮಾನವು ಲಾಹೋರ್‌ನಿಂದ ಕರಾಚಿಗೆ ತೆರಳಿತ್ತು. ವಿಮಾನದಲ್ಲಿ 100 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಾಷ್ಟ್ರೀಯ ದೂರದರ್ಶನದಲ್ಲಿ ಪ್ರಸಾರವಾದ ಚಿತ್ರಗಳು ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನವು ವಸತಿ ಪ್ರದೇಶಕ್ಕೆ ಒಡೆದಿದೆ ಎಂದು ತೋರಿಸಿದೆ,

“ಕರಾಚಿಯಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ನಾವು ಪ್ರಯಾಣಿಕರ ಸಂಖ್ಯೆಯನ್ನು ಖಚಿತಪಡಿಸಲು ಪ್ರಯತ್ನಿಸುತ್ತಿದ್ದೇವೆ. ಅದು 99 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಪ್ರಯಾಣಿಸುತ್ತಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿದೆ ” ಎಂದು ದೇಶದ ವಾಯುಯಾನ ಪ್ರಾಧಿಕಾರದ ವಕ್ತಾರ ಅಬ್ದುಲ್ ಸತ್ತಾರ್ ಖೋಖರ್ ಹೇಳಿದ್ದಾರೆ,

PIA plane crashes near Karachi’s Model Colony area

ಕರೋನ ವೈರಸ್ ಸಾಂಕ್ರಾಮಿಕ ರೋಗದ ಕಾರಣ ಈ ತನಕ ವಿಮಾನ ಯಾನ ಬಂದ್ ಮಾಡಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೆ ಪಾಕಿಸ್ತಾನ, ವಾಣಿಜ್ಯ ವಿಮಾನಗಳನ್ನು ಪುನರಾರಂಭಿಸಲು ಅನುಮತಿ ನೀಡಿತ್ತು. ಆದರೆ ಈಗ ಕೆಲವೇ ದಿನಗಳಲ್ಲಿ ಈ ದುರ್ಘಟನೆ ಸಂಭವಿಸಿದೆ.

ದೇಶಾದ್ಯಂತ ಪಾಕಿಸ್ತಾನಿಗಳು ರಂಜಾನ್ ಅಂತ್ಯ ಮತ್ತು ಮುಸ್ಲಿಂ ರಜಾದಿನದ ಈದ್ ಅಲ್-ಫಿತರ್ ಆರಂಭವನ್ನು ಆಚರಿಸಲು ತಯಾರಿ ನಡೆಸುತ್ತಿದ್ದರು. ಈ ಹಂತದಲ್ಲಿ ಈಗ ಅಪಘಾತ ಸಂಭವಿಸಿದೆ,

 

key words : PIA plane crashes near Karachi’s Model Colony area

 

ENGLISH SUMMARY :

A Pakistan passenger plane with more than 100 people believed to be on board crashed in the southern city of Karachi on Friday, the country’s aviation authority said.
Images aired on national television showed the Pakistan International Airlines flight had smashed into a residential area, with clouds of thick black smoke billowing from the site.