ಮೈಸೂರಿನ ಲಕ್ಷ್ಮಿ ಚಿತ್ರಮಂದಿರ ಇನ್ನು ಮುಂದೆ ನೆನಪಷ್ಟೇ…

ಮೈಸೂರು, ಜೂನ್ 13, 2021 (www.justkannada.in): ಏಳು ದಶಕಗಳ ಕಾಲ ಸಿನಿ ಪ್ರಿಯರನ್ನು ರಂಜಿಸಿದ್ದ ಲಕ್ಷ್ಮೀ ಚಿತ್ರಮಂದಿರ ಇನ್ನು ಮುಂದೆ ಇತಿಹಾಸ ಸೇರಲಿದೆ.

ಹೌದು. ಮೈಸೂರಿನ ಲಕ್ಷ್ಮಿ ಥಿಯೇಟರ್ ಇತಿಹಾಸ ಪುಟ ಸೇರಿದೆ. ಕೊರೊನಾದಿಂದ ಕಂಗೆಟ್ಟ ಚಿತ್ರಮಂದಿರು ಮಾಲೀಕರು ಮುಚ್ಚಲು ನಿರ್ಧರಿಸಿದ್ದಾರೆ.

ಉದ್ಯಮ ನಷ್ಟದಿಂದ ಲಕ್ಷ್ಮೀ ಚಿತ್ರಮಂದಿರ ಮುಚ್ವುವ ನಿರ್ಧಾರ ಕೈಗೊಳ್ಳಲಾಗಿದೆ. 1949 ರಿಂದ ಇಲ್ಲಿಯವರಿಗೆ ಸಿನಿ ಪ್ರಿಯರ ರಂಜಿಸುತ್ತಿದ್ದ ಚಿತ್ರಮಂದಿರ. ಇನ್ನು ಮುಂದೆ ನೆನಪಿನಲ್ಲಿ ಮಾತ್ರ ಉಳಿಯಲಿದೆ.

ನಿರಂತರವಾದ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಶ್ವತವಾಗಿ ಮುಚ್ಚಿದ  ಲಕ್ಷ್ಮಿ ಥಿಯೇಟರ್, ಕೋರೋನಾದಿಂದ ಕಳೆದ ಒಂದೂವರೆ ವರ್ಷದಿಂದಲೂ ನಷ್ಟದಲ್ಲಿದ್ದ ಲಕ್ಷ್ಮಿ ಥಿಯೇಟರ್.

ನಷ್ಟದ ಕಾರಣ ಶಾಶ್ವತವಾಗಿ  ಥಿಯೇಟರ್  ಮುಚ್ಚಿದ ಮಾಲೀಕರು. ಪರಭಾಷಾ ಸೇರಿದಂತೆ 600 ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಕಂಡಿದ್ದ ಇದೇ ಚಿತ್ರಮಂದಿರದಲ್ಲಿ.