ಮಾವುತರು, ಕಾವಾಡಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ಉಪಹಾರ ವ್ಯವಸ್ಥೆ…

Promotion

ಮೈಸೂರು,ಅಕ್ಟೋಬರ್,24,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಬಂದಿರುವ ಮಾವುತರು ಮತ್ತು ಕಾವಾಡಿಗಳಿಗೆ ಸಂಸದ ಶೋಭಾ ಕರಂದ್ಲಾಜೆ ಉಪಹಾರ ವ್ಯವಸ್ಥೆ ಮಾಡಿದ್ದು ತಾವೇ ಖುದ್ಧು ಉಪಹಾರ ಬಡಿಸಿದರು.mysore-dasara-mavutha-kavadi-breakfast-mp-shobha-karandlaje

ಮೈಸೂರಿನ ಅಂಬಾ ವಿಲಾಸ ಅರಮನೆಯಂಗಳದಲ್ಲಿ ಮಾವುತರು, ಕಾವಾಡಿಗಳು ವಾಸ್ತವ್ಯ ಹೂಡಿದ್ದು ಇಂದು ಇವರಿಗೆ ಸಂಸದೆ ಶೋಭಾ ಕರಂದ್ಲಾಜೆ ಉಪಹಾರ ವ್ಯವಸ್ಥೆ ಮಾಡಿದ್ದರು. ಇಡಗಲಿ, ದೋಸೆ, ಪೊಂಗಲ್, ವಡೆ, ಕಾಯಿ ಒಬ್ಬಟ್ಟು, ಪಲ್ಯ ಸೇರಿದಂತೆ ಹಲವು ಉಪಹಾರವನ್ನ ತಯಾರಿಸಿದ್ದು, ಮಾವುತರು, ಕಾವಾಡಿಗಳಿಗೆ  ಸಂಸದೆ ಶೋಭಾ ಕರಂದ್ಲಾಜೆ ತಾವೇ ಉಪಹಾರ ಬಡಿಸಿದರು.mysore-dasara-mavutha-kavadi-breakfast-mp-shobha-karandlaje

ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರು ಮಾವುತರು, ಕಾವಾಡಿಗಳಿಗೆ ಉಪಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗದ್ದಾಗಿನಿಂದಲೂ ಮಾವುತರು, ಕಾವಾಡಿಗಳ ಬಗ್ಗೆ ಕಾಳಜಿ ಮುಂದುವರೆಸಿಕೊಂಡು ಬಂದಿರುವ ಸಂಸದೆ ಕರಂದ್ಲಾಜೆ ಕೊರೊನಾ ಸಂದರ್ಭದಲ್ಲೂ ಮಾವುತರು, ಕಾವಾಡಿಗಳನ್ನ ಮರೆಯದೇ ಈ ಬಾರಿಯೂ ಉಪಹಾರ ವ್ಯವಸ್ಥೆ ಮಾಡಿದ್ದಾರೆ.

Key words: mysore dasara-mavutha-kavadi- Breakfast-MP shobha karandlaje