ಆದಾಯಮೀರಿ ಆಸ್ತಿ ಗಳಿಕೆ ಆರೋಪ: ಖುದ್ದು ಹಾಜರಾಗಲು ಸಚಿವ ವಿ.ಸೋಮಣ್ಣಗೆ ಸಮನ್ಸ್.

ಬೆಂಗಳೂರು,ಮಾರ್ಚ್,22,2022(www.justkannada.in): ಆದಾಯಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ವಿ.ಸೋಮಣ್ಣ ಮತ್ತೆ ಸಂಕಷ್ಟ ಶುರುವಾಗಿದ್ದು,  ಪ್ರಕರಣ ಸಂಬಂಧ ಏಪ್ರಿಲ್ 16 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ನೀಡಿದೆ.

ಜನಪ್ರಿತಿನಿಧಿಗಳ ಕೋರ್ಟ್ ನಲ್ಲಿ ಸಚಿವ ಸೋಮಣ್ಣ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಸಚಿವವಿ. ಸೋಮಣ್ಣ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಆರೋಪಿಸಿ 2013ರಲ್ಲಿ ಸಚಿವ ಸೋಮಣ್ಣ ವಿರುದ್ಧ ರಾಮಕೃಷ್ಣ ಎಂಬುವವರು ದೂರು ನೀಡಿದ್ದರು. ಶೇ. 204ರಷ್ಟು ಹೆಚ್ಚುವರಿ ಆಸ್ತಿ ಗಳಿಕೆ ಆರೋಪದ ಮೇಲೆ ಸೋಮಣ್ಣ ವಿರುದ್ಧ  ದಾಖಲೆ ಸಮೇತವಾಗಿ ದೂರು  ನೀಡಲಾಗಿತ್ತು.

2016ರಲ್ಲಿ ಸಚಿವ  ಸೋಮಣ್ಣ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ನೀಡಿರುವ ಆದೇಶದಂತೆ ತನಿಖೆ ನಡೆಸಿದ ಎಸಿಬಿ  ಸೋಮಣ್ಣಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ನಿನ್ನೆ ಎಸಿಬಿ ವರದಿಯನ್ನು ಜನಪ್ರತಿನಿಧಿಗಳ ಕೋರ್ಟ್ ತಿರಸ್ಕರಿಸಿದೆ. ಕೋರ್ಟ್ ಸೋಮಣ್ಣ ವಿರುದ್ಧವಾಗಿ ಕೇಸ್ ದಾಖಲಿಸುವಂತೆ ಸೂಚನೆಯನ್ನು ನೀಡಿದೆ. ಅಲ್ಲದ ಏಪ್ರಿಲ್ 16 ರಂದು ಖುದ್ದು ಹಾಜರಾಗುವಂತೆ ಸಚಿವ ಸೋಮಣ್ಣಗೆ ಸಮನ್ಸ್ ನೀಡಿದೆ.

Key words: Minister-V.Somanna- Summons.-Court