“ಮಂಗಳೂರು-ಉಡುಪಿ ಹೆದ್ದಾರಿ ನಡುವಿನ ಸುರತ್ಕಲ್ ಟೋಲ್ ಗೇಟ್‌ ರದ್ದುಪಡಿಸುವಂತೆ ಮನವಿ”

ಬೆಂಗಳೂರು,ಫೆಬ್ರವರಿ, 12,2021(www.justkannada.in) : ಮಂಗಳೂರುಉಡುಪಿ ಹೆದ್ದಾರಿಯ ಮಧ್ಯೆ ಬರುವ ಸುರತ್ಕಲ್ ಟೋಲ್ ಗೇಟ್ರದ್ದುಪಡಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ್ದಾರೆ.

jk

 ಬಹುದಿನಗಳ ಬೇಡಿಕೆಯಾದ ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸುವುದರ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಕುರಿತು ಭರವಸೆ ನೀಡಿದ್ದು, ಶೀಘ್ರವೇ ಸಭೆ ಕರೆಯಲು ಆದೇಶ ನೀಡುವುದಾಗಿ ತಿಳಿಸಿದ್ದಾರೆ.

BJP-Grapham-election-Supported-Candidates-BJP-win-most- seats-President-Nalin Kumar Kateel-confident

ರಾಜಧಾನಿ ಬೆಂಗಳೂರುಮಂಗಳೂರು ಸಂಪರ್ಕಿಸಲು ಪರ್ಯಾಯ ರಸ್ತೆಯಾಗಿರುವ ಮಾಣಿಮೈಸೂರು ರಾಜ್ಯ ಹೆದ್ದಾರಿಯನ್ನು ಮಾಣಿಯಿಂದ ಕುಶಾಲನಗರದ ತನಕ ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವನ್ನು ಪರಿಗಣಿಸುವುದಾಗಿಯೂ ನಿತಿನ್ ಗಡ್ಕರಿ ತಿಳಿಸಿದ್ದಾರೆ.

 

key words : Mangalore-Udupi-Highway-Between-Surathkal-
Toll gate-cancellation-Appeal