ಡಿ ಬಾಸ್ ಬರ್ತ್ ಡೇ ಗೆ ‘ರಾಬರ್ಟ್’ ಟೀಸರ್ ರಿಲೀಸ್

ಬೆಂಗಳೂರು, ಫೆಬ್ರವರಿ 12, 2021 (www.justkannada.in): ಡಿ ಬಾಸ್ ದರ್ಶನ್ ಹುಟ್ಟುಹಬ್ಬಕ್ಕೆ ಕಾದಿರುವ ಅಭಿಮಾನಿಗಳಿಗೂ ಗಿಫ್ಟ್ ಕಾದಿದೆ!

ಹೌದು. ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಟ್ರೈಲರ್ ಗಿಫ್ಟ್ ನೀಡಲು ಚಿತ್ರತಂಡ ನಿರ್ಧರಿಸಿದೆ.

ಫೆಬ್ರವರಿ 16 ರಂದು ದರ್ಶನ್ ಜನ್ಮದಿನವಿದ್ದು, ಆ ದಿನದಂದು ಟ್ರೈಲರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಉಡುಗೊರೆ ನೀಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಈ ವಿಚಾರವನ್ನು ನಿರ್ದೇಶಕ ತರುಣ್ ಸುಧೀರ್ ಪ್ರಕಟಿಸಿದ್ದಾರೆ.

ಅಂದಹಾಗೆ ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.