ಮರಾಠ ಅಭಿವೃದ್ಧಿ ಪ್ರಾಧಿಕಾರ ಕೈ ಬಿಡದಿದ್ರೆ ಡಿ. 5ರಂದು ಕರ್ನಾಟಕ ಬಂದ್- ವಾಟಾಳ್ ನಾಗರಾಜ್ ಘೋಷಣೆ…

kannada t-shirts

ಬೆಂಗಳೂರು, ನವೆಂಬರ್ 17,2020(www.justkannada.in):  ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರದ ನಡೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಈ ನಿರ್ಧಾರವನ್ನ ಕೈಬಿಡದಿದ್ದರೇ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. kannada-journalist-media-fourth-estate-under-loss

ಸಿಎಂ ಬಿ. ಎಸ್. ಯಡಿಯೂರಪ್ಪ ‘ಮರಾಠ ಅಭಿವೃದ್ಧಿ ಪ್ರಾಧಿಕಾರ’ ರಚನೆ ಮಾಡಲು ಒಪ್ಪಿಗೆ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದು ಸರ್ಕಾರದ ನಿರ್ಧಾರದ ವಿರುದ್ಧ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿರುವ  ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಖಂಡಿಸಿದ್ದಾರೆ. ಸರ್ಕಾರ ತನ್ನ ತೀರ್ಮಾನವನ್ನು ವಾಪಸ್ ಪಡೆಯದಿದ್ದರೆ ಡಿಸೆಂಬರ್ 5ರಂದು ಕರ್ನಾಟಕ ಬಂದ್ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.karnataka-bandh-maratha-development-authority-karnataka-bandh-dec-5-declaration-vatal-nagaraj

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ವಾಟಾಳ್ ನಾಗರಾಜ್, ‘ಮರಾಠ ಅಭಿವೃದ್ಧಿ ಪ್ರಾಧಿಕಾರ’ ರಚನೆ ರಾಜ್ಯಕ್ಕೆ ಅಗೌರವ ತರುವಂತಹದ್ದು.  ಚುನಾವಣೆಗೋಸ್ಕರ ಪ್ರಾಧಿಕಾರ ರಚನೆಗೆ ಮುಂದಾಗಿದ್ದಾರೆ. ಹೀಗಾಗಿ  ‘ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆದೇಶ ವಾಪಸ್ ಪಡೆಯಲು ನವೆಂಬರ್ 27ರ ತನಕ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಸರ್ಕಾರ ಆದೇಶ ವಾಪಸ್ ಪಡೆಯದಿದ್ದರೆ ಕನ್ನಡ ಒಕ್ಕೂಟದಿಂದ ಕರ್ನಾಟಕ ಬಂದ್ ನಡೆಸಲಾಗುತ್ತದೆ. ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.

English summary….

Drop Maratha Development Authority or else we call for a bandh on Dec. 5: Vatal Nagaraj
Bengaluru, Nov. 17, 2020 (www.justkannada.in): Chief Minister B.S. Yedyurappa’s approval for establishment of the ‘Maratha Development Authority’ has led to wide spread debate across the state, attracting pro and against opinions. Opposing the CMs decision of establishing the Maratha Development Authority, Kannada Chaluvali Vatal Paksha President Vatal Nagaraj has alleged that it is an election gimmick and has warned of calling for a Karnataka Bandh on December 5, if the CM fails to withdraw his decision.karnataka-bandh-maratha-development-authority-karnataka-bandh-dec-5-declaration-vatal-nagaraj
Keywords: Vatal Nagaraj-Maratha Development Authority-CM BSY-Bandh

Key words: Karnataka Bandh – Maratha Development Authority- Karnataka Bandh   Dec 5-Declaration – Vatal Nagaraj.

website developers in mysore