ಕಾಲೇಜುಗಳು ಆರಂಭ ಹಿನ್ನೆಲೆ: ನ.19 ರಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಉಪನ್ಯಾಸಕರು, ಸಿಬ್ಬಂದಿಗೆ ಮೈಸೂರು ವಿವಿ  ಸೂಚನೆ…

ಮೈಸೂರು, ನವೆಂಬರ್,17,2020(www.justkannada.in): ಇಂದಿನಿಂದ ರಾಜ್ಯಾದ್ಯಂತ  ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ  ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ನವೆಂಬರ್ 19 ರಂದು ಕೋವಿಡ್ ತಪಾಸಣೆ ಮಾಡಿಸಿಕೊಳ್ಳುವಂತೆ ಮೈಸೂರು ವಿಶ್ವ ವಿದ್ಯಾನಿಲಯ ಕುಲಸಚಿವ ಡಾ. ಶಿವಪ್ಪ ಆದೇಶ ಹೊರಡಿಸಿದ್ದಾರೆ.kannada-journalist-media-fourth-estate-under-loss

ಸರ್ಕಾರದ ನಿರ್ದೇಶಾನುಸಾರ ಸ್ನಾತಕ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಿರುವ ಹಿನ್ನೆಲೆ, ನವೆಂಬರ್ 19 ರಂದು ಬೆಳಿಗ್ಗೆ 10.30ರಿಂದ 1.30ರವರೆಗೆ ಎಲ್ಲಾ ಸ್ನಾತಕೋತ್ತರ ಅಧ್ಯಯನ ವಿಭಾಗದ ಉಪನ್ಯಾಸಕರು, ಅತಿಥಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಗಳು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು.

ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಈ ಕೆಳಕಂಡ ಅಧಿಕಾರಿಗಳನ್ನ ಸಂಪರ್ಕಿಸುವಂತೆ ಮೈಸೂರು ವಿಶ್ವ ವಿದ್ಯಾನಿಲಯ ಕುಲಸಚಿವ ಡಾ. ಶಿವಪ್ಪ ಸೂಚಿಸಿದ್ದಾರೆ.

ಡಾ.ಎಂ.ಎಸ್  ಬಸವರಾಜು, ವೈದ್ಯಾಧಿಕಾರಿ, ಮಹಾರಾಜ ಕಾಲೇಜು ಆವರಣ, ಮೈಸೂರು ವಿವಿ…

ಡಾ. ಶುಭ ಗೋಪಾಲ್,  ಪ್ರಾಧ್ಯಾಪಕರು, ಸೂಕ್ಷ್ಮ ಜೀವಾಣುಶಾಸ್ತ್ರ ಅಧ್ಯಯನ ವಿಭಾಗ, ಮಾನಸಗಂಗೋತ್ರಿ.

ಡಾ. ಚಂದ್ರ ನಾಯಕ್, ಸಂಯೋಜಕರು, ವಿಜ್ಞಾನ ಭವನ, ಮಾನಸಗಂಗೋತ್ರಿ.

ಡಾ. ತೇಜಸ್ ಬಾಬು ಸಿ. ಕಲ್ಸವಾಡಿ, ಸಹಾಯಕ ಪ್ರಾಧ್ಯಾಪಕರು, ಜೆನೆಟಿಕ್ಸ್ ಅಂಡ್ ಜಿನೋಮಿಕ್ಸ್ ಅಧ್ಯಯನ ವಿಭಾಗ, ಮೈಸೂರು ವಿವಿ.Colleges- start -  Mysore university- instruction -test Kovid - Nov. 19

ಡಾ. ಸಿ.ಡಿ ಮೋಹನ್, ಸಹಾಯಕ ಪ್ರಾಧ್ಯಾಪಕರು, ಸೂಕ್ಷ್ಮ ಜೀವಾಣು ಶಾಸ್ತ್ರ, ಮಾನಸಗಂಗೋತ್ರಿ ಮೈಸೂರು.

English summary…

MU instructs lecturers and staff to undergo Covid test on Nov. 19
Mysuru, Nov. 17, 2020 (www.justkannada.in): The Mysore University Registrar Shivappa has released orders instructing all the lecturers, guest lecturers and staff members of the university to take Covid test compulsorily on November 19.
Colleges offering Degree and Post Graduate courses have commenced from today across the state as per government instructions. Following this all the lecturers, guest lecturers, non teaching staff have to take the Covid test on November 19 from 10.30 am to 1.30 pm.
The following officers will be the point of contact in this regard:
Dr. M.S. Basavaraju, Medical Officer, Maharaja College premises, Mysore University.
Dr.Shubha Gopal, Professor, Micro-Biology Research Division, Manasa Gangotri.
Dr. Chandra Nayak, Coordinator, Vignana Bhavana, Manasa Gangotri
Dr. Tejas Babu C., Kalsawaadi, Assistant Professor, Genetics and Genomics Research Division, Mysore University.Colleges- start -  Mysore university- instruction -test Kovid - Nov. 19
Dr. C.D. Mohan, Assistant Professor, Micro-Biology, Manasa Gangotri, Mysuru.
Keywords: COVID-19-MU-test-November 19

Key words: Colleges- start –  Mysore university- instruction -test Kovid – Nov. 19