ಸಂಸದೆ ಸುಮಲತಾ ಅಂಬರೀಶ್ ಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಜೆಡಿಎಸ್ ಶಾಸಕ.

Promotion

ಮಂಡ್ಯ,ಮಾರ್ಚ್,27,2022(www.justkannada.in):  ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ಶಾಸಕರ ನಡುವಿನ ವಾಕ್ಸಮರ ಮತ್ತೆ ಮುಂದುವರಿದಿದ್ದು, ಇದೀಗ ಸುಮಲತಾ ಅಂಬರೀಶ್ ಅವರಿಗೆ ಶಾಸಕ ಡಿಸಿ ತಮ್ಮಣ್ಣ ಬಹಿರಂಗ ಚರ್ಚಗೆ ಆಹ್ವಾನಿಸಿದ್ದಾರೆ.

ಶಾಸಕರ ಕೆಲಸವನ್ನ ನಾನೇ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ಧ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕಿಡಿಕಾರಿರುವ ಶಾಸಕ ಡಿ.ಸಿ ತಮ್ಮಣ್ಣ,  ನಮ್ಮ ಜನರು ಕೊಡುವ ಸರ್ಟಿಫಿಕೆಟ್ ನಮಗೆ ಮುಖ್ಯ. ಇನ್ನೊಬ್ಬರ ಸರ್ಟಿಫಿಕೆಟ್ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಸಮಸ್ಯೆಯನ್ನ ಬಗೆಹರಿಸುವುದಿದ್ದರೆ ಸುಮಲತಾ ಬಗೆಹರಿಸಲಿ. ಸುಮಲತಾ ನಮ್ಮ ಕೆಲಸದ ಬಗ್ಗೆ ಓಪನ್ ಚಾಲೆಂಜ್ ಮಾಡಲಿ. ಸುಮಲತಾ ಯಾವಾಗ ಚರ್ಚೆಗೆ ಬಂದರೂ ನಾನು ಸಿದ್ಧನಿದ್ದೇನೆ  ಆಹ್ವಾನ ನೀಡಿದರು.

ಇನ್ನೊಂದೆಡೆ ಶಾಸಕ ಸುರೇಶ್ ಗೌಡ ಮಾತನಾಡಿ, ಸಂಸದೆ ಸುಮಲತಾ ಬುದ್ದಿ ಏನು ಅಂತ ಅರ್ಥವಾಗಿದೆ. ನಾವು ಏನು ಮಾತನಾಡಿದರೂ ಸಹ  ಸುಮಲತಾ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಅವರ ಪ್ರಕಾರ ನಾವು ಯಾರು ಶಾಸಕರು ಕ್ಷೇತ್ರದಲ್ಲಿ ಇಲ್ಲ. ನಾವು ನಿಷ್ಪ್ರಯೋಜಕರು, ಏನು ಅನುದಾನ ತಂದಿಲ್ಲ, ಬಹಳ ಸಂತೋಷ. ಇನ್ನು ಒಂದು ವರ್ಷವಾದ ಮೇಲೆ ಜನರೇ ತೀರ್ಪು ಕೊಡ್ತಾರೆ  ಕಿಡಿಕಾರಿದರು.

Key words: JDS-MLA-DC Thammanna -MP -Sumalatha Ambarish