ಹೃತಿಕ್ ರೋಷನ್ ಹೊಸ ಲುಕ್ ಕಂಡು ಬೆರಗಾದ ಬಾಲಿವುಡ್ ಮಂದಿ !

Promotion

ಬೆಂಗಳೂರು, ಡಿಸೆಂಬರ್ 01, 2020 (www.justkannada.in): ಹೃತಿಕ್ ರೋಷನ್ ಇನ್ಸ್​ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿದ್ದು, ನೆಚ್ಚಿನ ನಟನ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಹೃತಿಕ್​ ರೋಷನ್​ ಅವರ ಈ ಫೋಟೋ ಕಂಡು ಅಭಿಮಾನಿಗಳು ಶಾಕ್​ ಆದರೆ ಸ್ಟಾರ್​ ನಟರೂ ಕೂಡ ಹುಬ್ಬೇರಿಸಿದ್ದಾರೆ. ಶಾಹಿದ್​ ಕಪೂರ್​, ಮೃನಾಲ್​ ಠಾಕೂರ್​ ಹಾಗೂ ಪ್ರೀತಿ ಝಿಂಟಾ ಕೂಡ ಹೃತಿಕ್​ ರ ನ್ಯೂ ಲುಕ್​ಗೆ ಕಮೆಂಟ್​ ಮಾಡಿದ್ದಾರೆ.

ಅಂದಹಾಗೆ ಹೃತಿಕ್ ರೋಷನ್​ ತಮ್ಮ ಲುಕ್​ಗಳ ಮೂಲಕವೇ ಕಳೆದ ಅನೇಕ ವರ್ಷಗಳಿಂದ ಅಭಿಮಾನಿಗಳನ್ನ ಸೆಳೆಯುತ್ತಿರುವ ಬಾಲಿವುಡ್​ ನಟ.