ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಸೀದಿಯೊಳಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲಿ- ಸಚಿವ ಸುನೀಲ್ ಕುಮಾರ್.

Promotion

ಮಂಗಳೂರು,ಫೆಬ್ರವರಿ,5,2022(www.justkannada.in):  ಹಿಜಾಬ್ ವಿವಾದಕ್ಕೆ ಬಿಜೆಪಿ ಕಾರಣ ಎಂದು ಹೇಳಿಕೆ ನೀಡಿದ್ಧ ಮಾಜಿ ಸಿಎಂ ಸಿದ‍್ಧರಾಮಯ್ಯಗೆ ತಿರುಗೇಟು ನೀಡಿರುವ ಇಂಧನ ಸಚಿವ ಸುನೀಲ್ ಕುಮಾರ್, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಸೀದಿಯೊಳಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲಿ ಎಂದು ಹೇಳಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುನೀಲ್ ಕುಮಾರ್,  ಹಿಜಾಬ್ ವಿವಾದ ವ್ಯವಸ್ಥಿತಿ ಷಡ್ಯಂತ್ರ. ಹಿಜಾಬ್, ಬುರ್ಖಾ ಇತ್ಯಾದಿಗಳನ್ನು ಮುಸಲ್ಮಾನ ಹೆಣ್ಣುಮಕ್ಕಳು ಮನೆಯಿಂದ ಶಾಲೆ, ಕಾಲೇಜು ಕಂಪೌಂಡ್ ವರೆಗೆ ಹಾಕಿಕೊಂಡು ಬರಲಿ, ಅದಾದ ನಂತರ ತರಗತಿಗಳಲ್ಲಿ ಕುಳಿತುಕೊಳ್ಳುವಾಗ ಎಲ್ಲಾ ವಿದ್ಯಾರ್ಥಿಗಳಂತೆಯೇ ಸಮವಸ್ತ್ರದಲ್ಲಿ ಕುಳಿತುಕೊಳ್ಳುವುದು ಸಂಪ್ರದಾಯ ಹೇಳಿದರು.

ಹಿಜಾಬ್ ಹಾಕುವುದು ವ್ಯಕ್ತಿ ಸ್ವಾತಂತ್ರ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೆಲವು ಸಂಘಟನೆಗಳು ಬೊಬ್ಬಿಡುತ್ತಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ನೀಡಲಿ ನೋಡೋಣ ಎಂದು ಟಾಂಗ್ ನೀಡಿದರು.

ಹಾಗೆಯೇ ತ್ರಿವಳಿ ತಲಾಖ್ ನ್ನು ರದ್ದು ಮಾಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಮೋದಿ ಸರ್ಕಾರ ಭದ್ರತೆಯನ್ನು ಕೊಟ್ಟಿದೆ. ಇದನ್ನು ಅರ್ಥ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವುದಕ್ಕೆ ಮುಸ್ಲಿಂ ಮಹಿಳೆಯರು ಪ್ರಯತ್ನ ಮಾಡಬೇಕು,   ಯಾರೋ ಶಾಲೆಯ ನೆಪದಲ್ಲಿ ರಾಜಕೀಯ ಮಾಡುವುದು ಬೇಡ  ಎಂದು ಸುನೀಲ್ ಕುಮಾರ್ ತಿಳಿಸಿದರು.

Key words: hijab-mosque- Minister-Sunil Kumar.