ರಾಜ್ಯದಲ್ಲಿ ಸಾಮರಸ್ಯ ಕಾಣಬೇಕು ಎಂದಾದ್ರೆ ಹಿಜಾಬ್ ವಿಚಾರ ಇಲ್ಲಿಗೆ ಬಿಡಿ- ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೆಚ್.ಡಿಕೆ ವಾಗ್ದಾಳಿ.

ಬೆಂಗಳೂರು,ಫೆಬ್ರವರಿ,5,2022(www.justkannada.in): ರಾಜ್ಯದಲ್ಲಿ ಸಾಮರಸ್ಯ ಕಾಣಬೇಕು ಎನ್ನುವುದಾದರೇ ಹಿಜಾಬ್ ವಿಚಾರವನ್ನ ಇಲ್ಲಿಗೆ ಬಿಡಿ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮೊದೆಲಲ್ಲ ಬೇಟಿ ಬಚಾವೋ ಬೇಟಿ ಪಡಾವೋ ಅಂತಿದ್ದರು. ಈಗ ಬೇಟಿ ಹಠಾವೋ ಎನ್ನುವಂತೆ ಮಾಡಿದ್ದಾರೆ. ಕಳೆದ 15 ದಿನಗಳಿಂದ ಹಿಜಾಬ್ ವಿವಾದ ಕೇಳಿ ಬರುತ್ತಿದೆ. ಮುಖ್ಯಮಂತ್ರಿಯಾದವರು ಇಂತಹ ವಿಚಾರಗಳನ್ನು ಸರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು.

ಸಮಾಜದ ವಾತಾವರಣ ಕಲುಷಿತ ಆಗದ ರೀತಿ ನೋಡಿಕೊಳ್ಳಬೇಕು. ಕರಾವಳಿ ಪ್ರದೇಶದಲ್ಲಿ ಕೆಲವು ಕಡೆ ಈ ರೀತಿಯ ಬುರ್ಖಾ ವ್ಯವಸ್ಥೆ ಇತ್ತು ಅನ್ನೋದು ನನ್ನ ಗಮನಕ್ಕೆ ಇದೆ. ಕೆಲವು ಮುಸ್ಲಿಂ ಸಮಾಜದಲ್ಲಿ ಇತ್ತೀಚಿಗೆ ಕೆಲವು ಸಂಘಟನೆಗಳು ಬೆಳೆಯುತ್ತಿವೆ. ಯಾವ ಶಾಲೆಯಲ್ಲಿ ಹಿಜಾಬ್​ಗೆ ಅನುಮತಿ ಕೊಟ್ಟಿದ್ದರೋ ಅವರು ಅದನ್ನು ಮುಂದುವರೆಸಿಕೊಂಡು ಹೋಗಲಿ. ಹೊಸದಾಗಿ ಈಗ ಕೆಲವರು ಇಂಥವಕ್ಕೆ ಯಾಕೆ ಅನುಮತಿ ಕೊಟ್ಟರು? ಹಿಂದು-ಮುಸ್ಲಿಂ ಎಂಬುದಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಇಂತಹ ಭಾವನೆ ಬೆಳೆಯಲು ಏಕೆ ಅವಕಾಶ ಕೊಡ್ತಾ ಇದ್ದೀರಿ? ಎಂದು ಹೆಚ್.ಡಿ ಕುಮಾರಸ್ವಾಮಿ ಗುಡುಗಿದರು.

Key words: hijab-bjp-congress- HD Kumaraswamy