ಪಕ್ಕದ ಆಂಧ್ರದಲ್ಲಿ ಸಮಸ್ಯೆ ಆದಾಗ ಟ್ವೀಟ್ ಮಾಡ್ತೀರಿ: ನಮ್ಮ ಕರ್ನಾಟಕ ಜನ ಏನ್ ಮಾಡಿದ್ರು.?-ಪ್ರಧಾನಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿ…

ಮೈಸೂರು,ಅಕ್ಟೋಬರ್,20,2020(www.justkannada.in): ರಾಜ್ಯಕ್ಕೆ ನೆರವು ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ ನೆರವಿಗಿಂತ ಎನ್‌ಡಿಎ ಅವಧಿಯಲ್ಲಿ ಹೆಚ್ಚಿನ ನೆರವು ನೀಡಲಾಗಿದೆ ಎಂದು ಹೇಳಿಕೊಳ್ಳುವ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿಕಾರಿದರು.jk-logo-justkannada-logo

ಮೈಸೂರಿನ‌ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಕೆಪಿಸಿಸಿ ವಕ್ತಾರ ಎಂ‌‌. ಲಕ್ಷ್ಮಣ್, ರಾಜ್ಯದಲ್ಲಿ ಮೇಲಿಂದ ಮೇಲೆ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಕಳೆದ ವರ್ಷದಿಂದ ಇತ್ತೀಚಿನವರೆಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿಯಿಂದ ಅಂದಾಜು 48 ಸಾವಿರ ಕೋಟಿ ನಷ್ಟವಾಗಿದೆ. ಆದರೆ ಕೇಂದ್ರ ಸರ್ಕಾರ ಕೇವಲ 2 ಸಾವಿರ ಕೋಟಿ ನೆರವು ನೀಡಿದೆಯಷ್ಟೇ. ಆದರೆ ನೆರೆಯ ಆಂಧ್ರಪ್ರದೇಶಕ್ಕೆ ಹೆಚ್ಚಿನ ‌ನೆರವು ನೀಡಲಾಗಿದೆ‌‌. ರಾಜ್ಯಕ್ಕೆ ನೆರವು ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ ನೆರವಿಗಿಂತ ಎನ್‌ಡಿಎ ಅವಧಿಯಲ್ಲಿ ಹೆಚ್ಚಿನ ನೆರವು ನೀಡಲಾಗಿದೆ ಎಂದು ಹೇಳಿಕೊಳ್ಳುವ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಪಕ್ಕದ ಆಂಧ್ರದಲ್ಲಿ ಸಮಸ್ಯೆ ಆದಾಗ ಟ್ವೀಟ್ ಮಾಡ್ತೀರಿ: ನಮ್ಮ ಕರ್ನಾಟಕ ಜನ ಏನ್ ಮಾಡಿದ್ರು.?

ಯುಪಿಎ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಆಗಿದ್ದ ನಷ್ಟಕ್ಕಿಂತ ಹೆಚ್ಚಿನ ನಷ್ಟ ಎನ್‌ಡಿಎ ಅವಧಿಯಲ್ಲಿ ಆಗಿದೆ‌. ಆದರೂ ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ‌. ಕರ್ನಾಟಕ ನೆರೆ ಸಂದರ್ಭದಲ್ಲಿ ಒಂದು ಟ್ವೀಟ್ ಮಾಡುವಂತ ಕೆಲಸವನ್ನು ಮೋದಿ  ಮಾಡಲಿಲ್ಲ. ಪಕ್ಕದ ಆಂಧ್ರದಲ್ಲಿ ಸಮಸ್ಯೆ ಆದಾಗ ಟ್ವೀಟ್ ಮಾಡ್ತೀರಿ, ಸಿಎಂ ಜೊತೆ ಮಾತಾಡ್ತೀರಿ. ನಮ್ಮ ಕರ್ನಾಟಕ ಜನ ಏನ್ ಮಾಡಿದ್ರು.? ಮುಖ್ಯ ಮಂತ್ರಿಗಳ ಜೊತೆ ಮಾತುಕತೆ ನಡೆಸಿ ಇಲ್ಲಿನ ಪರಿಸ್ಥಿತಿ ತಿಳಿಯಲಿಲ್ಲ ಯಾಕೆ.? ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಎಂಪಿಗಳು ಎಲ್ಲಿದ್ದಾರೆ. ಉತ್ತರ ಕರ್ನಾಟಕಕ್ಕೆ ಕನಿಷ್ಟ  ಸಾಂತ್ವಾನ ಹೇಳುವಂತ ಕೆಲಸ ಮಾಡಲಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.‌ ಲಕ್ಷ್ಮಣ್  ಹರಿಹಾಯ್ದರು.

ಕೊರೋನಾ ವಾರಿಯರ್ಸ್‌ ಸಾವನ್ನಪ್ಪಿದ್ರೆ ಗೆ 50  ಲಕ್ಷ ನೀಡುವುದಾಗಿ ಭರವಸೆ ನೀಡಿದ್ದ ಸಿಎಂ ತಮ್ಮ ಮಾತಿಗೆ ನಡೆದುಕೊಂಡಿಲ್ಲ..

ಕೊರೋನಾ ವಾರಿಯರ್ಸ್‌ ಸಾವನ್ನಪ್ಪಿದ್ರೆ ಗೆ 50  ಲಕ್ಷ ನೀಡುವುದಾಗಿ ಭರವಸೆ ನೀಡಿದ್ದ ಸಿಎಂ ತಮ್ಮ ಮಾತಿಗೆ ನಡೆದುಕೊಂಡಿಲ್ಲ. 600ಜನ ವಾರಿಯರ್ಸ್‌ ಗಳು ಸಾವನ್ನಪ್ಪಿದ್ದಾರೆ. ಕೇವಲ 13 ಜನರಿಗೆ ಮಾತ್ರ ಪರಿಹಾರ ನೀಡಿದ್ದೀರಿ. ಕೇವಲ ಪ್ರಚಾರಕ್ಕೆ ಘೋಷಣೆ ಮಾಡ್ತೀರಿ. ಬಿಜೆಪಿ ಸರ್ಕಾರಕ್ಕೆ ನಾಚಿಕರ ಆಗಬೇಕು ಎಂದು ಕಿಡಿಕಾರಿದರು.flood-pm-modi-tweet-mysore-kpcc-spokesperson-m-laxman

ಯಾವುದೋ ಇನ್ಸೂರೆನ್ಸ್ ಕಂಪನಿಗೆ ಇದರ ಜವಬ್ದಾರಿ ವಹಿಸಿದ್ದಾರೆ. ಆದರೆ ಆ ಕಂಪನಿಯವರು ಕಾರಣಗಳನ್ನ ಹೇಳಿ ವಾರಿಯರ್ಸ್ ಗೆ ಹಣ ನೀಡುತ್ತಿಲ್ಲ. ಭರವಸೆ ನೀಡಿ ಕೇವಲ ಪ್ರಚಾರ ಮಾತ್ರ ತೆಗೆದುಕೊಳ್ಳುತ್ತೀರಿ. ಇದೊಂದು ದುರಂತ ಎಂದು ಸರ್ಕಾರದ ವಿರುದ್ದ ಕೆಪಿಸಿಸಿ ವಕ್ತಾರ. ಲಕ್ಷ್ಮಣ್ ಕಿಡಿಕಾರಿದರು.

Key words: flood-pm modi- tweet-mysore-  KPCC spokesperson- M. Laxman