ಟೆಸ್ಟ್ ಸರಣಿ: ಚೆನ್ನೈನತ್ತ ಟೀಂ ಇಂಡಿಯಾ, ಇಂಗ್ಲೆಂಡ್ ಆಟಗಾರರು

Promotion

ಬೆಂಗಳೂರು, ಜನವರಿ 27, 2021 (www.justkannada.in): ಭಾರತ-ಇಂಗ್ಲೆಂಡ್ ಮಧ್ಯೆ ಫೆಬ್ರವರಿ 5ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಇದಕ್ಕಾಗಿ ಆಟಗಾರರು ಚೆನ್ನೈನತ್ತ ಬರುತ್ತಿದ್ದಾರೆ.

ಅಜಿಂಕ್ಯ ರಹಾನೆ, ವೇಗದ ಬೌಲರ್ ಶಾರ್ದುಲ್ ಠಾಕೂರ್, ಬ್ಯಾಟ್ಸ್ ಮೆನ್ ರೋಹಿತ್ ಶರ್ಮಾ ಈಗಾಗಲೇ ಚೆನ್ನೈ ತಲುಪಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಉಳಿದ ಸದಸ್ಯರು ಇಂದು ಚೆನ್ನೈ ತಲುಪಲಿದ್ದಾರೆ.

ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಮೊಯಿನ್ ಅಲಿ ಚೆನ್ನೈ ತಲುಪಿದ್ದಾರೆ. ಉಳಿದ ಇಂಗ್ಲೆಂಡ್ ಆಟಗಾರರು ಇಂದು ಚೆನ್ನೈಗೆ ಬರಲಿದ್ದಾರೆ.