ಫಸ್ಟ್ ಡೇ ಫಸ್ಟ್ ಶೋ ! ಹೇಗಿದ್ದವು ಮೊದಲ ದಿನ ಚಿತ್ರಮಂದಿರಗಳು !

Promotion

ಬೆಂಗಳೂರು, ಫೆಬ್ರವರಿ 01, 2020 (www.justkannada.in): ಇಂದಿನಿಂದ ಪೂರ್ಣ ಪ್ರಮಾಣದ ಚಿತ್ರಮಂದಿರಗಳನ್ನು ಓಪನ್ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ.

ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಿನಿಮಾ ಪ್ರದರ್ಶನ ಮಾಡುವಂತೆ ತಿಳಿಸಿದೆ. ಕಂಟೈನ್ ಮೆಂಟ್ ವಲಯಗಳಲ್ಲಿ ಮಾತ್ರ ಹಿಂದೆ ಇದ್ದ ನಿಯಮಗಳು ಮುಂದುವರೆಯಲಿದೆ.

ಚಿತ್ರಮಂದಿರಗಳಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ ಹಾಗೂ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ.

ಅಕ್ಟೋಬರ್ ನಲ್ಲಿ ಚಿತ್ರಮಂದಿರಗಳನ್ನು ಓಪನ್ ಮಾಡಲು ಅವಕಾಶ ನೀಡಿತ್ತಾದರೂ, ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶವಿರಲಿಲ್ಲ. ಕೇಂದ್ರದ ನಿರ್ಧಾರದಿಂದ ಇದೀಗ ಚಿತ್ರಮಂದಿರಗಳ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಕುಳಿತು ಸಿನಿಮಾ ವೀಕ್ಷಿಸಬಹುದಾಗಿದೆ.