ಹಿಟ್ ಅಂಡ್ ರನ್ ಕೇಸ್ ಗೆ ಹೆದರಿ ಆಟೋ ಡ್ರೈವರ್ ಆತ್ಮಹತ್ಯೆಗೆ ಶರಣು…

Promotion

ಮೈಸೂರು,ಏ,1,2019(www.justkannada.in): ಹಿಟ್ ಅಂಡ್ ರನ್ ಕೇಸ್ ಗೆ ಹೆದರಿ ಆಟೋ ಡ್ರೈವರ್  ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರಿನ ಕನಕಗಿರಿಯಲ್ಲಿ  ಈ ಘಟನೆ ನಡೆದಿದೆ. ಶಿವಕುಮಾರ್ (೨೫) ಆತ್ಮಹತ್ಯೆಗೆ ಶರಣಾದ ಆಟೋಡ್ರೈವರ್ . ಶಿವಕುಮಾರ್ ಇದೇ ಭಾನುವಾರ ಪಾದಚಾರಿ ಒಬ್ಬರಿಗೆ ಆಟೋದಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಎಲೆತೋಟದ ಬಳಿ ಘಟನೆ ನಡೆದಿತ್ತು.  ಗಾಯಾಳು ಆಟೋ ನಂಬರ್ ಬರೆದುಕೊಂಡು ಕೆ.ಆರ್.ಟ್ರಾಫಿಕ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಸಂಚಾರಿ ಠಾಣಾ ಪೊಲೀಸರು ಕರೆಸಿ ವಿಚಾರಣೆ ನಡೆಸಿ ಆಟೋ ಸೀಜ್ ಮಾಡಿದ್ದರು. ಇದರಿಂದ ಮನನೊಂದ ಶಿವಕುಮಾರ್ ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಡಿಯೋದಲ್ಲಿ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಿವಕುಮಾರ್, ಗಾಯಾಳುವಿಗೆ ಕ್ಷಮೆ ಕೋರಿದ್ದಾರೆ. ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Fearing – hit and- run- case-Auto Driver- surrenders -suicide.