ವೃದ್ಧ  ಕೊರೋನಾದಿಂದ ಸತ್ತಿದ್ದು ಇನ್ನು ದೃಢವಾಗಿಲ್ಲ- ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ…

ಬೆಂಗಳೂರು,ಮಾ,11,2020(www.justkannada.in): ದುಬೈನಿಂದ ಬಂದಿದ್ದ ಕಲ್ಬುರ್ಗಿಯ ವೃದ್ಧ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆಂಬ ವದಂತಿ ಹಿನ್ನೆಲೆ ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ವೃದ್ಧ  ಕೊರೋನಾದಿಂದ ಸತ್ತಿದ್ದು ಇನ್ನು ದೃಢವಾಗಿಲ್ಲ. ಕಲ್ಬುರ್ಗಿ ಮೂಲದ ವೃದ್ಧ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಆದರೆ ಈ ಬಗ್ಗೆ ದೃಢವಾಗಿಲ್ಲ ಎಂದು ತಿಳಿಸಿದರು.

ವೃದ್ಧ ದುಬೈನಿಂದ ವಾಪಸ್ ಆಗಿದ್ದರು. ಕೊರೋನಾ ಶಂಕೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೊರೋನಾ ಸೋಂಕಿನಿಂದ ಮೃತಪಟ್ಟಿರುವುದು ದೃಢವಾಗಿಲ್ಲ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸರ್ಕಾರ ಎಲ್ಲಾ ರೀತಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ಕೊರೊನಾ ವೈರಸ್ ಶಂಕಿತ ಕರ್ನಾಟಕದ ವೃದ್ಧ ಸಾವನಪ್ಪಿದ್ದಾರೆ. ಗುಲ್ಬರ್ಗದ 75 ವರ್ಷ ಅಜ್ಜ ಕರ್ನಾಟಕದ ಮೊದಲ ಎನ್ನಲಾಗಿತ್ತು

ಕೊರೊನಾ ವೈರಸ್ ಶಂಕಿತ ವ್ಯಕ್ತಿ ಫೆಬ್ರವರಿ 29 ರಂದು ದುಬೈನಿಂದ ಗುಲ್ಬರ್ಗಕ್ಕೆ ಬಂದಿದ್ದರು. ಅನಾರೋಗ್ಯ ಕಾರಣದಿಂದ ಗುಲ್ಬರ್ಗದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಕೊರೊನಾ ಸೋಂಕು ಶಂಕೆ ವ್ಯಕ್ತವಾದ ಕಾರಣ ಕುಟುಂಬದವರು ಹೈದರಾಬಾದ್‌ಗೆ ಶಿಫ್ಟ್ ಮಾಡಿದರು. ಹೈದರಾಬಾದ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ನಿನ್ನೆ ರಾತ್ರಿ ಸಾವನಪ್ಪಿದ್ದರು.

Key words: Dead -corona –no confirm-Health Minister- Sriramulu