ಕಾರು ಮತ್ತು ಅರೆಸೇನಾ ಪಡೆಯ ತರಬೇತಿ ವಾಹನದ ನಡುವೆ ಡಿಕ್ಕಿ: ಕಾರು ಚಾಲಕನ ಸ್ಥಿತಿ ಗಂಭೀರ…

Promotion

ಮೈಸೂರು,ಫೆ,24,2020(www.justkannada.in):  ಖಾಸಗಿ ಕಾರು ಮತ್ತು ಅರೆಸೇನಾ ಪಡೆಯ ತರಬೇತಿ ವಾಹನದ ನಡುವೆ ಡಿಕ್ಕಿಯಾಗಿ ಕಾರು ಚಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಕೆಆರ್ ಪುರ ವೃತ್ತದ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಖಾಸಗಿ ಕಾರಿನಲ್ಲಿದ್ದ ಮೂರು ಜನರ ಪೈಕಿ ಚಾಲಕನ ಸ್ಥಿತಿ ಗಂಭೀರವಾಗಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಖಾಸಗಿ ಕಾರು ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದ್ದು, ಕಾರಿನ ಮುಂಭಾಗ ಜಖಂ ಆಗಿದೆ

ಸ್ಥಳಕ್ಕೆ ಭೇಟಿ ನೀಡಿದ ದೊಡ್ಡ ಕವಲಂದೆ ಠಾಣಾ ಪೊಲೀಸರು ಅಪಘಾತಕ್ಕೀಡಾದ ಅರೆಸೇನಾ ಪಡೆಯ ತರಬೇತಿ ವಾಹನ ಮತ್ತು ಖಾಸಗಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಪ್ರಕರಣ ಮಾಡಿಕೊಂಡಿದ್ದಾರೆ. ಖಾಸಗಿ ಕಾರಿನಲ್ಲಿದ್ದ ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದ್ದಾರೆ.

Key words:  collision- between – car – training vehicle-mysore