ಯಶಸ್ವಿನಿ ಯೋಜನೆ ಮತ್ತೆ ಆರಂಭ: ಮುಖ್ಯಮಂತ್ರಿ ಆರೋಗ್ಯವಾಹಿನಿ ಘೋಷಣೆ.

Promotion

ಬೆಂಗಳೂರು,ಮಾರ್ಚ್,4,2022(www.justkannada.in):  ರೈತರಿಗೆ ಬಜೆಟ್ ನಲ್ಲಿ ಸಿಹಿಸುದ್ದಿ ನೀಡಲಾಗಿದ್ದು, ಯಶಸ್ವಿನಿ ಮತ್ತೆ ಆರಂಭಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.

 ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಸಿಎಂ ಬೊಮ್ಮಾಯಿ, ರೈತರ ಬಹುದಿನದ ಬೇಡಿಕೆಯಾದ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ, ಮರು ಜಾರಿಗೊಳಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಲಭಿಸಲಿದೆ ಯಶಸ್ವಿನಿ ಯೋಜನೆಯ ಮರು ಜಾರಿಗಾಗಿ ರಾಜ್ಯ ಸರ್ಕಾರದಿಂದ 300 ಕೋಟಿ ರೂ ಒದಗಿಸಲಾಗುತ್ತಿದೆ ಎಂದರು.

ಹಾಗೆಯೇ ಮುಖ್ಯಮಂತ್ರಿ ಆರೋಗ್ಯವಾಹಿನಿ ಘೋಷಣೆ ಮಾಡಲಾಗಿದ್ದು ರಾಜ್ಯದ 52 ಲಕ್ಷ ಮಕ್ಕಳಿಗೆ ಹಾಲಿನ ಪುಡಿ ವಿತರಣೆ, ಚಿತ್ರದುರ್ಗಕ್ಕೆ ಹೊಸ ವೈದ್ಯಕೀಯ ಕಾಲೇಜು, ಹುಬ್ಬಳ್ಳಿಯಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಜಯದೇವ ಆಸ್ಪತ್ರೆ ಸ್ಥಾಪನೆ.  ಮೈಸೂರಿನ ಕೆಆರ್ ಆಸ್ಪತ್ರೆಗೆ 89 ಕೋಟಿ ರೂ. ಹಾವೇರಿ, ಶಿಗ್ಗಾಂವಿ ಆಸ್ಪತ್ರೆ ಮೇಲ್ದರ್ಜೆಗೆರಿಸುವುದು ಸೇರಿ ಹಲವು ಕಾರ್ಯಕ್ರಮಗಳನ್ನ ಘೋಷಿಸಿದ್ದಾರೆ.

Key words: cm-Basavaraj bommai-budget