ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಳ: ಉದ್ಯೋಗಸ್ಥ ಮಹಿಳೆಯರಿಗೆ ಹೊಸ ವಸತಿ ನಿಲಯ –ಸಿಎಂ ಘೋಷಣೆ.

ಬೆಂಗಳೂರು,ಮಾರ್ಚ್,4,2022(www.justkannada.in):  ಆಶಾ ಕಾರ್ಯಕರ್ತೆಯ ಗೌರವ ಧನ ಹೆಚ್ಚಳ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ.

ಈ ಕುರಿತು ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಹಾಗೆಯೇ ಉದ್ಯೋಗಸ್ಥ ಮಹಿಳೆಯರಿಗೆ ಹೊಸ ವಸತಿ ನಿಲಯ. ಆಶಾಕಾರ್ಯಕರ್ತೆಯರಿಗೆ 1 ಸಾವಿರ ಗೌರವ ಧನ ಹೆಚ್ಚಳ. ಪ್ರವಾಸಿ ಗೈಡ್ ಗಳಿಗೆ ಮಾಸಿಕ 2ಸಾವಿರ ರೂ.ಗೌರವ ಧನ.  ಬಿಸಿಯೂಟ ತಯಾರಕರ ಗೌರವಧನ 1000 ರೂಪಾಯಿ ಹೆಚ್ಚಳ.  ಆ್ಯಸಿಡ್ ದಾಳಿಯ ಸಂತ್ರಸ್ತ ಮಹಿಳೆಯರ ಮಾಸಿಕ ಧನ 10,000 ರೂಪಾಯಿಗೆ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ವಸತಿ ಶಾಲೆಗಳನ್ನು ಎಪಿಜೆ ಅಬ್ದುಲ್ ಕಲಾಂ ಶಾಲೆಗಳೆಂದು ಮರುನಾಮಕರಣ. ಮಾರುಕಟ್ಟೆ ಸ್ಥಾಪಿಸಲು 50 ಕೋಟಿ ರೂಪಾಯಿ ನಿಗದಿ. ಬಾಲ್ಯ ವಿವಾಹ ತಡೆಗೆ ಸ್ಫೂರ್ತಿ ಯೋಜನೆ ವಿಸ್ತರಣೆ ಮುಂತಾದ ಯೋಜನೆ ಘೋಷಿಸಿದ್ದಾರೆ.

Key words: Increase –salary- Asha Workers-budget