ನ್ಯಾಯಕ್ಕಾಗಿ ಮೂವರು ಮಕ್ಕಳ ಜೊತೆ ಟವರ್ ಏರಿದ ತಂದೆ.

Promotion

ಚಿಕ್ಕಬಳ್ಳಾಫುರ,ಫೆಬ್ರವರಿ,4,2023(www.justkannada.in): ನನಗೆ ಮಾಹಿತಿಯಿಲ್ಲದೆ ಕೆಲವರು ನನ್ನ ಜಮೀನು ಸೇಲ್ ಡೀಡ್ ಮಾಡಿಕೊಂಡಿದ್ದಾರೆ. ಆದರೆ ನನಗೆ ನ್ಯಾಯ ಕೊಡಿಸಲು ಪೊಲೀಸರು ಕಂದಾಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಮೂವರು ಮಕ್ಕಳ ಜೊತೆ ತಂದೆ ಟವರ್ ಏರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಕನ್ನಂಪಲ್ಲಿ ಬಳಿ ನಡೆದಿದೆ.

ತಂದೆ ಗಂಗರಾಜು(32) ಹಾಗೂ ಮೂವರು ಮಕ್ಕಳಾದ ಮಕ್ಕಳಾದ ನಿತೀನ್(4) ಅಂಕಿತ(11) ನಿಕೀಲ್ (10) ಮೊಬೈಲ್ ಟವರ್ ಏರಿದ್ದರು. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿದ್ದು,  ಈ ವೇಳೆ ಗಂಗರಾಜುರನ್ನ ಕೆಳಕ್ಕೆ ಇಳಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು. ಅಧಿಕಾರಿಗಳು ಜಮೀನು ವಿವಾದ ಬಗೆಯರಿಸುವುದಾಗಿ ಭರವಸೆ ಕೊಟ್ಟ ನಂತರ ಗಂಗರಾಜು ಹಾಗೂ ಆತನ ಮಕ್ಕಳನ್ನು ಕೆಳಕ್ಕೆ ಇಳಿಸಿದರು.

ಜಮೀನು ವಿವಾದದಲ್ಲಿ ಅನ್ಯಾಯವಾಗಿದ್ದು, ಗ್ರಾಮದ ವೆಂಕಟರೆಡ್ಡಿ, ಮಲ್ಲಪ್ಪ, ನಾರಾಯಣಪ್ಪ ಎಂಬುವವರು ತನಗೆ ಮಾಹಿತಿಯಿಲ್ಲದೆ ನನ್ನ ಜಮೀನು ಸೇಲ್ ಡೀಡ್ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದ ಗಂಗರಾಜು ತನಗಾದ ಮೋಸಕ್ಕೆ ಪೊಲೀಸ್ ಕಂದಾಯ ಇಲಾಖೆಯಲ್ಲಿ ನ್ಯಾಯ ಸಿಕ್ಕಿಲ್ಲವೆಂದು, ನ್ಯಾಯಕ್ಕಾಗಿ ಆಗ್ರಹಿಸಿ ಮಕ್ಕಳ ಜೊತೆ ಟವರ್ ಏರಿದ್ದರು.

Key words: chikkaballapur- father- tower – three- children – justice.