Promotion
ಬೆಂಗಳೂರು, ಜುಲೈ 31, 2022 (www.justkannada.in): ವಿಜಯನಗರ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಕೆಲವೇ ಗಂಟೆಗಳ ಅಂತರದಲ್ಲಿ ಶನಿವಾರ ಹಿಂಪಡೆದಿದೆ.
ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ವಿಜಯನಗರದ ಉಸ್ತುವಾರಿ ಹೊಣೆ ಹೊತ್ತಿದ್ದ ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಹಾಗೂ ಕೊಪ್ಪಳದ ಉಸ್ತುವಾರಿ ಹೊಣೆ ಹೊತ್ತಿದ್ದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರನ್ನು ಶುಕ್ರವಾರ (ಸರ್ಕಾರಿ ಆದೇಶದ ಪ್ರಕಾರ) ಸರ್ಕಾರ ಅದಲು ಬದಲು ಮಾಡಿ ಆದೇಶ ಹೊರಡಿಸಿತ್ತು.
ಇದೀಗ ಮತ್ತೆ ಆದೇಶವನ್ನು ವಾಪಸ್ ಪಡೆದು ಇದರಿಂದ ಮೊದಲಿನಂತೆ ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಉಸ್ತುವಾರಿಗಳ ಬದಲಾವಣೆ ಯಾಕೆ ಆಗಿದೆ ಎಂಬ ವ್ಯಾಪಕ ಚರ್ಚೆಯಾಗತೊಡಗಿದ್ದವು. ಸರ್ಕಾರವೇ ಆದೇಶ ಮಾಡಿ ಮತ್ತೆ ಒಂದೇ ದಿನದಲ್ಲಿ ಆದೇಶ ರದ್ದು ಮಾಡಿರುವುದು ಸರ್ಕಾರದ ಕಾರ್ಯವೈಖರಿಯನ್ನೆ ಪ್ರಶ್ನೆ ಮಾಡುವಂತಾಗಿದೆ.