ಗಮನಿಸಿ… ಐಟಿ ರಿಟರ್ನ್ಸ್ ಸಲ್ಲಿಕೆಗೆ ಇಂದೇ ಕೊನೆ ದಿನ

ಬೆಂಗಳೂರು, ಜುಲೈ 31, 2022 (www.justkannada.in): 2021-22 ನೇ ಹಣಕಾಸು ವರ್ಷದ ಆದಾಯ ತೆರಿಗೆ ವಿವರ ಸಲ್ಲಿಸಲು ಜುಲೈ 31ರ ಇಂದು ಅಂತಿಮ ದಿನವಾಗಿದೆ

ಈ ಹಿಂದೆ ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಹಲವು ಬಾರಿ ಮುಂದೂಡಿದ್ದ ಕಾರಣ ಈ ಬಾರಿಯೂ ಸಹ ಮುಂದೂಡಬಹುದೆಂಬ ನಿರೀಕ್ಷೆಯಲ್ಲಿ ಬಹಳಷ್ಟು ಮಂದಿ ಇದ್ದರು.

ಆದರೆ ಈ ಬಾರಿ ಅವಧಿ ವಿಸ್ತರಣೆ ಸಾಧ್ಯತೆ ಇಲ್ಲ ಎಂಬುದು ಬಹುತೇಕ ಖಚಿತವಾಗಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಹಲವು ಬಾರಿ ಈ ಕುರಿತು ಸ್ಪಷ್ಟನೆ ನೀಡಿದ್ದು ಯಾವುದೇ ಕಾರಣಕ್ಕೂ ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಮುಂದೂಡಲಾಗುವುದಿಲ್ಲ ಎಂದು ಈ ಹಿಂದೆಯೇ ತಿಳಿಸಿದ್ದರು.

2021-22 ನೇ ಹಣಕಾಸು ವರ್ಷದ ಆದಾಯ ತೆರಿಗೆ ವಿವರ ಸಲ್ಲಿಸದವರು ಇಂದು ಆ ಕೆಲಸವನ್ನು ಪೂರ್ಣಗೊಳಿಸಬಹುದಾಗಿದೆ.