ರಾಜ್ಯ ಬಜೆಟ್ ನಲ್ಲಿ ಮಹದಾಯಿ ಮತ್ತು ಎತ್ತಿನಹೊಳೆ ಯೋಜನೆಗೆ ಅನುದಾನ…

Promotion

ಬೆಂಗಳೂರು,ಮಾ,5,2020(www.justkannada.in): ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು 2020-21 ಸಾಲಿನ ಪರಿಷ್ಕೃತ ಬಜೆಟ್  ಮಂಡಿಸಿದ್ದು,  ಈ ವೇಳೆ ಉತ್ತರ ಕರ್ನಾಟಕದ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ.

ಮಹದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ  ಸಿಎಂ ಬಿ.ಎಸ್. ಯಡಿಯೂರಪ್ಪ  ಮಹದಾಯಿ ಯೋಜನೆಗೆ 500 ಕೋಟಿ ರೂ ಅನುದಾನ ಮೀಸಲಿಡುವುದಾಗಿ ಹೇಳಿದ್ದಾರೆ. ಹಾಗೆಯೇ ಎತ್ತಿನಹೊಳೆ ಯೋಜನೆಗೆ ಆದ್ಯತೆ ನೀಡಲಾಗಿದ್ದು ಈ ಯೋಜನೆಗೆ  1500ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಸಿಂ ಬಿಎಸ್ ವೈ ತಿಳಿಸಿದ್ದಾರೆ.

ಈ ಜತೆಗೆ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ನೀರಿನ ಆಯವ್ಯಯ ಆಡಿಟ್ ರಚನೆ ಮಾಡಲಾಗುವುದು, ಪ್ರತಿ ಗ್ರಾಮಕ್ಕೂ ಜಲಗ್ರಾಮ ಕ್ಯಾಲೆಂಡರ್ ಕಿಂಡಿ ಅಣೆಕಟ್ಟು ರಚನೆಗೆ ಆದ್ಯತೆ ಅಟಲ್ ಭೂಜಲ ಯೋಜನೆಗೆ ಒತ್ತು ರಾಜ್ಯದ 5 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು  ಬಜೆಟ್ ನಲ್ಲಿ ತಿಳಿಸಿದ್ದಾರೆ.

Key words:  budget- cm bs yeddyurappa- Mahadayi- ettinahole –plan- grant