ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವ್ಯಂಗ್ಯಭರಿತ ವೆಲ್’ಕಮ್ ಮಾಡಿದ ಬಿಜೆಪಿ

Promotion

ಬೆಂಗಳೂರು, ಮೇ 12, 2019 (www.justkannada.in): ಕಳೆದ ಕೆಲವು ದಿನಗಳಿಂದ ರೆಸಾರ್ಟ್‌ ವಾಸ್ತವ್ಯ ಮಾಡುತ್ತಿರುವ ಕುಮಾರಸ್ವಾಮಿ ಭಾನುವಾರ ಬೆಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಬಿಜೆಪಿ ಈ ರೀತಿ ಸ್ವಾಗತ ಕೋರುವ ಮೂಲಕ ಲೇವಡಿ
ಮಾಡಿದೆ.

ಮಡಿಕೇರಿ ಸಮೀಪದ ಇಬ್ಬನಿ ರೆಸಾರ್ಟ್‌ನಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ ಭಾನುವಾರ ಮಧ್ಯಾಹ್ನ ಮದ್ದೂರಿಗೆ ಆಗಮಿಸಿ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನಂತರ ರಾಜಧಾನಿಗೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಟ್ವೀಟರ್‌ ಮೂಲಕ ಕುಮಾರಸ್ವಾಮಿಗೆ ಲೇವಡಿ ಮಾಡಿದೆ.

ವೆಲ್‌ ಕಮ್‌ ಟು ಬೆಂಗಳೂರು ಎಚ್‌ಡಿ ಕುಮಾರಸ್ವಾಮಿ ಅವರೇ, ನಿಮ್ಮ ರೆಸಾರ್ಟ್‌ ವಾಸ್ತವ್ಯ ಚೆನ್ನಾಗಿತ್ತು ಎಂದು ಕೊಳ್ಳುತ್ತೇವೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಲಾಗಿದೆ.ವೆಲ್‌ ಕಮ್‌ ಟು ಬೆಂಗಳೂರು ಕುಮಾರಸ್ವಾಮಿ ಅವರೇ ಎಂದು ಸ್ವಾಗತ ಕೋರುವ ಮೂಲಕ ವ್ಯಂಗ್ಯವಾಡಿದೆ.