ಸಚಿವ ಡಿ.ಕೆ ಶಿವ ಕುಮಾರ್ ರನ್ನ ಭೇಟಿ ಮಾಡಿದ ಬಿಜೆಪಿ ಸಂಸದ ಬಿವೈ ರಾಘವೇಂದ್ರ…

Promotion

 ಬೆಂಗಳೂರು,ಜೂ,5,2019(www.justkannada.in):  ಶಿವಮೊಗ್ಗ ಕ್ಷೇತ್ರದ ನೂತನ ಸಂಸದಬಿ.ವೈ ರಾಘವೇಂದ್ರ ಇಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಬೆಂಗಳೂರಿನ ಸಚಿವ ಡಿ,ಕೆ ಶಿವ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಸಂಸದ ಬಿವೈ ರಾಘವೇಂದ್ರ ತಮ್ಮ ಕ್ಷೇತ್ರ ವ್ಯಾಪ್ತಿಯ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 6 ನೀರಾವರಿ ಯೋಜನೆಗಳು ಘೋಷಣೆಯಾಗಿವೆ.  ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸಚಿವ ಡಿ.ಕೆ ಶಿವಕುಮಾರ್ ಬಳಿ ಕೋರಿದರು.

ಹಾಗೆಯೇ ಅನುದಾನ ಬಿಡುಗಡೆ ಜತೆಗೆ ಕೂಡಲೇ ಟೆಂಡರ್ ಆಹ್ವಾನಿಸಿ ನೀರಾವರಿ ಯೋಜನೆಗಳ ಕಾಮಾಗಾರಿಗಳನ್ನ ಕೈಗೆತ್ತಿಕೊಳ್ಳುವಂತೆ ಬಿವೈ ರಾಘವೇಂದ್ರ ಮನವಿ ಮಾಡಿದರು.

Key words: BJP MP BY Raghavendra met minister DK Shiv Kumar.

#bangalore #BYRaghavendra #ministerDKShivKumar.