Tuesday, September 1, 2026

BDA Apartments

Home Front Page ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ: ದೇಶಕ್ಕೆ ನಳಿನ್ ಪ್ರಥಮ…

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ: ದೇಶಕ್ಕೆ ನಳಿನ್ ಪ್ರಥಮ…

ನವದೆಹಲಿ,ಜೂ,5,2019(www.justkannada.in):  ವೈದ್ಯ ಹಾಗೂ ದಂತ ವೈದ್ಯ ಕೋರ್ಸ್​ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್​) ಫಲಿತಾಂಶ ಪ್ರಕಟವಾಗಿದ್ದು. ರಾಜಸ್ತಾನ  ಮೂಲದ ನಳಿನ್ ಖಂಡೇವಾಲ ದೇಶಕ್ಕೆ ಪ್ರಥಮ ಗಳಿಸಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​​ಟಿಎ) ಇಂದು ಫಲಿತಾಂಶ ಪ್ರಕಟಿಸಿದ ಫಲಿತಾಂಶದಲ್ಲಿ ರಾಜಸ್ಥಾನದ ನಳೀನ್ ದೇಶಕ್ಕೆ ಪ್ರಥಮ ಗಳಿಸಿದ್ದರೇ, ದೆಹಲಿ ಮೂಲದ ಭವಿಕ್ ಭನ್ಸಾಲ್ 2ನೇ ಸ್ಥಾನ ಮತ್ತು ಉತ್ತರ ಪ್ರದೇಶ ಮೂಲದ ಅಕ್ಷತ್ ಕೌಶಿಕ್  3ನೇ ಸ್ಥಾನ ಪಡೆದಿದ್ದಾರೆ. ದೇಶಕ್ಕೆ 36ನೇ ರ್ಯಾಂಕ್ ಪಡೆದಿರುವ ಫಣೀಂದ್ರ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.

ನೀಟ್ ಪರೀಕ್ಷೆಗೆ 14,10,755 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 7,,97,042 ಮಂದಿ ಉತ್ತೀರ್ಣರಾಗಿದ್ದಾರೆ.

Key words: NEET results are announced. Nalin first to the country.

#NEET #results #announced