ಅನರ್ಹರನ್ನ ಸೋಲಿಸೋದು ನನ್ನ ಗುರಿ ಎನ್ನುತ್ತಿರುವವರು ತಮ್ಮ ಅಪ್ಪ ಮಗನನ್ನೇ ಗೆಲ್ಲಿಸಲು ಆಗ್ಲಿಲ್ಲ- ಹೆಚ್ ಡಿಕೆಗೆ ಸಚಿವ ಈಶ್ವರಪ್ಪ ಟಾಂಗ್…

Promotion

ಬೆಳಗಾವಿ,ನ,23,2019(www.justkannada.in):  ಅನರ್ಹ ಶಾಸಕರನ್ನ ಸೋಲಿಸೋದೆ ನನ್ನ ಗುರಿ ಎನ್ನುತ್ತಿದ್ದಾರೆ ಆದರೆ ತಮ್ಮ ಅಪ್ಪ ಮತ್ತು ಮಗನನ್ನೇ ಗೆಲ್ಲಿಸೋಗೆ ಆಗಲಿಲ್ಲ ಎಂದು  ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರಿಗೆ ಸಚಿವ ಕೆ. ಎಸ್. ಈಶ್ವರಪ್ಪ ಅವರು ಟಾಂಗ್‌ ನೀಡಿದರು.

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಚುನಾವಣೆಯಲ್ಲಿ ಇಬ್ಬರು ಮಹಾಪುರುಷರು ಹೇಳಿಕೆ ನೀಡಿದ್ದಾರೆ. ಒಬ್ಬರು ಚುನಾವಣೆ ನಂತರ ಸರ್ಕಾರ ಬೀಳುತ್ತೆ ಎಂದಿದ್ದಾರೆ. ಮತ್ತೊಬ್ಬರು ಅನರ್ಹರನ್ನ ಸೋಲಿಸೋದೆ ನಮ್ಮ ಗುರಿ ಎಂದಿದ್ದಾರೆ. ಅದ್ರೆ ಅವರಿಗೆ ಅವರಿಗೆ ತನ್ನ ಅಪ್ಪ ಮತ್ತು ಮಗನನ್ನ ಗೆಲ್ಲಿಸಲು ಆಗಲಿಲ್ಲ. ಅವರ ಈ ಕೆಲಸಕ್ಕೆ ನೊಬೆಲ್ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ಕೆ,ಎಸ್ ಈಶ್ವರಪ್ಪ, ಸಿದ್ಧರಾಮಯ್ಯ ಹೆಸರು ಹೇಳಲು ನಮಗೆ ಮನಸ್ಸಿಲ್ಲ. ಸಿದ್ದರಾಮಯ್ಯ ಬರೀ ಸುಳ್ಳನ್ನೇ ಹೇಳುತ್ತಾರೆ. ಕುಮಾರಸ್ವಾಮಿ ಅವರಪ್ಪನ ಆಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದಿದ್ದರು. ಆದರೆ ನಂತರ ಇವರೇ ಅವರ ಪಾದದಡಿ ಕುಳಿತು ಸಿಎಂ ಮಾಡಿದರು. ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗುವುದಿಲ್ಲ ಎಂದಿದ್ದರು. ಇದೀಗ ಮತ್ತೆ ಸಿಎಂ ಆಗಿದ್ದಾರೆ. ಸಿದ್ಧರಾಮಯ್ಯ ವಿಪಕ್ಷದಲ್ಲಿ ಕೂರಲು ಯೋಗ್ಯರಲ್ಲ ಎಂದು ಲೇವಡಿ ಮಾಡಿದರು.

Key words: belagavi- minister- kes eshwarappa-tong-former cm-hd kumaraswamy