ಹಲಾಲ್ ಪ್ರಮಾಣ ಪತ್ರದ ಮೇಲೆ ನಿಷೇಧ?: ಯೋಗಿ ಆದಿತ್ಯನಾಥ ಸರಕಾರದ ಕ್ರಮ

Promotion

ಬೆಂಗಳೂರು, ನವೆಂಬರ್ 19, 2023 (www.justkannada.in): ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿ ಸಂಸ್ಥೆಗಳ ಮೇಲೆ ದೂರು ದಾಖಲಿಸಲಾಗಿದೆ. ಹಲಾಲ್ ಪ್ರಮಾಣ ಪತ್ರ ನೀಡಿ ಹಣ ಕೀಳುವವರ ವಿರುದ್ಧ ಯೋಗಿ ಆದಿತ್ಯನಾಥ ಸರಕಾರವು ಕ್ರಮ ಕೈಗೊಳ್ಳಲು ಆದೇಶ ನೀಡಿದೆ.

ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ. ಜತೆಗೆ ಉತ್ತರ ಪ್ರದೇಶ ಸರಕಾರ ಹಲಾಲ್ ಪ್ರಮಾಣ ಪತ್ರದ ಮೇಲೆ ನಿಷೇಧ ಹೇರುವ ಯೋಚನೆ ಕೂಡ ಮಾಡುತ್ತಿದೆ.

ಹಲಾಲ್ ಪ್ರಮಾಣ ಪತ್ರದ ಮೂಲಕ ಯಾವ ಇಸ್ಲಾಮಿ ಸಂಘಟನೆ ಹಣ ಸಂಗ್ರಹಿಸುತ್ತಿದೆ. ಆ ಹಣವನ್ನು ಭಯೋತ್ಪಾದಕ ಸಂಘಟನೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಾಗಿ ಬಳಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಈ ಆದೇಶ ನೀಡಿದ್ದಾರೆ.

ಲಕ್ಷ್ಮಣಪುರಿ ಪೊಲೀಸರು ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿ ಸಂಸ್ಥೆಗಳ ಮೇಲೆ ದೂರು ದಾಖಲಿಸಿದ್ದಾರೆ.