ವಿಶ್ವಕಪ್ ಫೈನಲ್’ಗೆ ಕ್ಷಣಗಣನೆ: ಪಂದ್ಯ ನೋಡಲು ಕೋಟ್ಯಾಂತರ ಭಾರತೀಯರ ಕಾತರ

ಬೆಂಗಳೂರು, ನವೆಂಬರ್ 19, 2023 (www.justkannada.in): ಇಂದು ಮಧ್ಯಾಹ್ನ 2 ಗಂಟೆಗೆ ವಿಶ್ವಕಪ್​ ಅಂತಿಮ ಹಣಾಹಣಿ ಶುರುವಾಗಲಿದೆ. ಚಾಂಪಿಯನ್ ಪಟ್ಟಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಡಲಿದೆ.

ಇಂದು ಅಹ್ಮದಾಬಾದ್​ ಮೈದಾನದಲ್ಲಿ ವಿಶ್ವಕಪ್​ ಫೈನಲ್​ ಪಂದ್ಯ ನಡೆಯಲಿದ್ದು, ಕೋಟ್ಯಾಂತರ ಭಾರತೀಯರು ಪಂದ್ಯ ನೋಡಲು ಕಾತರರಾಗಿದ್ದಾರೆ.

ಈಗಾಗಲೇ ಭಾರತದೆಲ್ಲಡೆ ವಿಶ್ವಕಪ್‌ ಜ್ವರ ತಾರಕಕ್ಕೇರಿದೆ. ಎಲ್ಲೆಡೆ ವಿಶ್ವಕಪ್‌ ಜಪ ಮಾತ್ರ ಗುನುಗುತ್ತಿದೆ. ಪಂದ್ಯವನ್ನು ನೋಡಲು ಸ್ವತಃ ಸ್ಟಾರ್ ನಟರು, ರಾಜಕೀಯ ದಿಗ್ಗಜರು ಕೂಡ ಮೈದಾನಕ್ಕೆ ಆಗಮಿಸುತ್ತಿದ್ದಾರೆ.

ಕನ್ನಡದ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಕನ್ನಡದ ನಟ ದರ್ಶನ್‌ ವಿಶ್ವಕಪ್‌ 2023ರ ಫೈನಲ್‌ಗಾಗಿ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸ್ವತಃ ಸ್ಟಾರ್‌ ಸ್ಪೋರ್ಟ್ಸ್‌ ಖಚಿತ ಪಡಿಸಿದೆ.