ಬಾಲ್ಯದ ಗೆಳೆಯನೊಂದಿಗೆ ಸಪ್ತಪದಿ ತುಳಿದ ನಟಿ ಮಯೂರಿ

Promotion

ಬೆಂಗಳೂರು, ಜೂನ್ 12, 2020 (www.justkannada.in): ಸ್ಯಾಂಡಲ್ ವುಡ್ ನಟಿ ಮಯೂರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗೆಳೆಯ ಅರುಣ್ ಅವರೊಂದಿಗೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಸಪ್ತಪದಿ ತುಳಿದಿದ್ದಾರೆ. ರಾತ್ರಿ 2.30 ರಿಂದ 3 ಗಂಟೆಯ ಮಹೂರ್ತದಲ್ಲಿ ಮದುವೆ ನೆರವೇರಿದ್ದು ಬ್ರಾಹ್ಮಿ ಮಹೂರ್ತದಲ್ಲಿ  ನಟಿ ಮಯೂರಿ ಹಸೆಮಣೆ ಏರಿದ್ದಾರೆ. 10 ವರ್ಷಗಳಿಂದ ಮಯೂರಿ ಮತ್ತು ಅರುಣ್ ಪ್ರೀತಿಸುತ್ತಿದ್ದರು.actress mayuri wedding with his childhood friend arun actress mayuri wedding with his childhood friend arun

ಎರಡು ಕುಟುಂಬದವರ ಒಪ್ಪಿಗೆಯೊಂದಿಗೆ ಇಂದು ಮದುವೆ ನೆರವೇರಿದೆ. ಅರುಣ್ ಐಟಿ ಉದ್ಯೋಗಿಯಾಗಿದ್ದು ಅಮೆರಿಕದಲ್ಲಿ ನೆಲೆಸಿದ್ದಾರೆ. ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.